ನೆಲಮಂಗಲ: 60ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನ ಆಳುತ್ತಿದ್ದ ಶ್ರೇಷ್ಟ ಮೇರು ನಟಿ ಲೀಲಾವತಿ ಇಂದು ತಾವು ಮಾಡಿರುವ ಕಾರ್ಯಕ್ಕೆ ಇಡೀ ರಾಜ್ಯವೆ ಮೆಚ್ಚುತ್ತಿದೆ. ಚೆನ್ನೈನಲ್ಲಿರುವ ತಮ್ಮ ಜಮೀನು ಮಾರಾಟ ಮಾಡಿರುವ ಲೀಲಾವತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ರಾಂಪುರದಲ್ಲಿ ಬಡವರಿಗಾಗಿ ಉಚಿತ ಆಸ್ಪತ್ರೆ ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದಾರೆ.
ಲೀಲಾವತಿಯವರ ಕನಸಿನ ಆಸ್ಪತ್ರೆಯನ್ನ ಇಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು, ಸಚಿವ ಆನಂದ್ ಸಿಂಗ್, ನಟ ದೊಡ್ಡಣ್ಣ, ಉಮೇಶ್ ಬಣಕಾರ್, ಬಾಮಾ ಹರೀಶ್ ಸೇರಿದಂತೆ ಹಲವು ಗಣ್ಯರು ಪಾಲ್ಘೊಂಡಿದ್ದರು. ಇನ್ನೂ ಚಿತ್ರ ನಟ ದೊಡ್ಡಣ ಸಹ ವೇದಿಕೆ ಮೇಲೆ ಲೀಲಾವತಿಯವರನ್ನ ಹಾಡಿ ಹೊಗಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡುವ ಭಾಷಣದುದ್ದಕ್ಕೂ ಲೀಲಾವತಿಯವರ ಸೌಂದರ್ಯದ ಬಗ್ಗೆ ಬಣ್ಣನೆ ಮಾಡಿದ್ರು,
ಅಷ್ಟೆ ಅಲ್ಲ ಅವರೂ ಜೀವನದುದ್ದಕ್ಕೂ ಸವೆಸಿದ ಆದಿ ಚಿತ್ರರಂಗದ ತೊಡಕುಗಳನ್ನ ಸ್ಮರಿಸಿದರು. ಅಲ್ಲದೇ ಲೀಲಾವತಿಯವರು ಪಶು ಆಸ್ಪತ್ರೆಗೆ ಬೇಡಿಕೆ ಇಟ್ಟ ಹಿನ್ನೆಲೆ ಪಶು ಆಸ್ಪತ್ರೆಯನ್ನ ಸಹ ಮಂಜೂರು ಮಾಡುವುದಾಗಿ ತಿಳಿಸಿದರು. ಇನ್ನೂ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ, ಆರೋಗ್ಯ ಸಚಿವರ ಗೈರು ಸಾಕಷ್ಟು ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ.
PublicNext
28/09/2022 09:58 pm