ಬೆಂಗಳೂರು: ದೀಪಾವಳಿ ಸಂಭ್ರಮದ ನಡುವೆ ಜೀವನವನ್ನು ಕತ್ತಲೆಗೆ ತಳ್ಳುವ ಪಟಾಕಿ ದುರಂತಗಳು ಪ್ರತಿ ವರ್ಷ ವರದಿಯಾಗುತ್ತಲೇ ಇದೆ. ಈ ಮಧ್ಯೆ ಪಟಾಕಿ ಹಚ್ಚುವವರಿಗಿಂತ ಬೇರೆಯವರೇ ಕಣ್ಣು ಕಳೆದು ಕೊಳ್ತಾ ಇದ್ದಾರೆ. ದೃಷ್ಟಿಹೀನರಾಗುವವರ ಸಂಖ್ಯೆ ಕೂಡ ಹೆಚ್ಚುತ್ತಾ ಇದೆ!
ಬೆಳಕಿನ ಹಬ್ಬದಲ್ಲಿ ದೀಪಗಳನ್ನು ಹಚ್ಚಿ ಖುಷಿ ಪಡುವಷ್ಟೇ ಬಹುತೇಕ ಮಂದಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸಿ ಆಸ್ಪತ್ರೆ ಕದ ಕಟ್ಟುವವರ ಸಂಖ್ಯೆ ಒನ್ ಟು ಡಬಲ್ ಆಗ್ತಾ ಇರುತ್ತೆ. ಆದ್ರೆ, ಶಾಕಿಂಗ್ ವಿಚಾರ ಏನಂದ್ರೆ ಪಟಾಕಿ ಹೊಡೆಯುವವರಿಗಿಂತಲೂ ಪಟಾಕಿ ಹೊಡೆಯುವುದನ್ನು ನೋಡುತ್ತಾ ನಿಂತವರು ಅಥವಾ ಅದೇ ದಾರಿಯಲ್ಲಿ ಹೋಗುವವರಿಗೆ ಕಣ್ಣಿನ ಗಾಯ ಜಾಸ್ತಿ ಆಗ್ತಾ ಇರೋ ಕೇಸ್ ಗಳು ವರ್ಷದಿಂದ ವರ್ಷಕ್ಕೆ ಡಬಲ್ ಆಗ್ತಿದೆ.
ಕಳೆದ ಬಾರಿ ಪಟಾಕಿಯಿಂದ ಹಾನಿಗೊಳಗಾಗಿ 41 ಮಂದಿ ನಗರದ ಮಿಂಟೋ ಆಸ್ಪತ್ರೆ ದಾಖಲಾಗಿದ್ದಾರೆ. ಆ ಪೈಕಿ 21 ಮಂದಿ ಪಟಾಕಿ ಹೊಡೀತಾನೆ ಇರಲಿಲ್ಲ. ಪಟಾಕಿ ಸಿಡಿಸುವ ಜಾಗದಲ್ಲಿ ಹೋಗ್ತಾ ಇದ್ದಾಗ ಅಥವಾ ಅಚಾನಕ್ ಆಗಿ ಕಣ್ಣಿಗೆ ಪಟಾಕಿ ಬಿದ್ದು ಕಣ್ಣು ಕಳೆದು ಕೊಂಡವರೇ ಜಾಸ್ತಿ ಇದ್ದಾರೆ. ಕಣ್ಣಿಗೆ ಪಟಾಕಿ ಬಿದ್ದ ಸಂದರ್ಭ ಕೆಲವೊಮ್ಮೆ ಕ್ರಿಟಿಕಲ್ ಕೆಲವೊಮ್ಮೆ ಮೈನರ್ ಇಂಜೂರಿ ಆಗುತ್ತೆ. ಆದ್ರೆ ಪಟಾಕಿ ಬಿದ್ದ ಸಂದರ್ಭ ಕಣ್ಣನ್ನು ಮಾತ್ರ ಯಾವುದೇ ಕಾರಣಕ್ಕೂ ಉಜ್ಜಬಾರದು ಅಂತಾರೆ ತಜ್ಞ ವೈದ್ಯರು.
PublicNext
31/10/2024 08:29 pm