ಬೆಂಗಳೂರು : ರಾಜ್ಯದಲ್ಲಿ ಬಾಣಂತಿಯರು ಹಾಗೂ ಶಿಶುಮರಣ ಪ್ರಕರಣ ಕಳೆದ ಮೂರು ವರ್ಷಗಳಿಂದ ಹೆಚ್ಚಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕೂಡ ಶಿಶುಮರಣ ಪ್ರಕರಣಗಳು ಕಳೆದ ಮೂರು ವರ್ಷಗಳಿಂದ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಬಾಣಂತಿಯರು ಹಾಗೂ ಶಿಶುಗಳ ಮರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆದೇಶ ಬೆನ್ನಲ್ಲೇ ಸಮಿತಿಯಿಂದ ರಾಜ್ಯ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ತನಿಖೆ ಚುರುಕು ಮುಟ್ಟಿದೆ. ಇನ್ನು ತನಿಖೆಯಲ್ಲಿ ಬಂದ ವರದಿ ಮತ್ತಷ್ಟು ಆತಂಕ ತಂದಿದ್ದು ಕಳೆದ ಮೂರು ವರ್ಷಗಳಲ್ಲಿ ನವಜಾತ ಶಿಶು ಮರಣ ಹಾಗೂ ತಾಯಿ ಮರಣ ಪ್ರಮಾಣ ಹೆಚ್ಚಳವಾಗಿದೆ.
ಸರ್ಕಾರದ ಆದೇಶದ ಮೇರೆಗೆ ತನಿಖೆ ನಡೆದಿದ್ದು ಆರೋಗ್ಯ ಇಲಾಖೆ ಅಂಕಿ ಅಂಶ ಬಯಲು ಮಾಡಿದ್ದು ಮತ್ತಷ್ಟು ಆತಂಕ ಹುಟ್ಟುಹಾಕಿದ. ಇಷ್ಟು ಸಾವುಗಳಾದರೂ ಕಣ್ಣು ಮುಚ್ಚಿ ಕುಳಿತಿದ್ದೀಯಾ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಎಂಬ ಪ್ರಶ್ನೆ ಮೂಡುತ್ತಿದೆ.
ನವಜಾತ ಶಿಶು ಮರಣ (0-1)
2021-22- 5040
2022-23-6330
2023-24-5120
------
ಶಿಶು ಮರಣ (0-5)
2021-22-5208
2022-23-6635
2023-24-5381
-------
ತಾಯಿ ಮರಣ..
2021-22-782
2022-23-699
2023-24-598
PublicNext
31/12/2024 02:36 pm