ಬೆಂಗಳೂರು: ಹೋಟೆಲ್ ಊಟ ಸೇವಿಸಿ ಮಕ್ಕಳು ಅಸ್ವಸ್ಥರಾಗಿರುವ ಘಟನೆ ಬೆಂಗಳೂರಿನ ನಾನ್-ವೆಜ್ ಹೋಟೆಲ್‌ನಲ್ಲಿ ನಡೆದಿದೆ.
ಬಿ ಬ್ಲಾಕ್ ಪರ್ಲ್ ಹೋಟೆಲ್‌ನಲ್ಲಿ ಊಟ ಸೇವಿಸಿದ ಮೂರು ಮಕ್ಕಳು ಅಶ್ವತ್ಥರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತದೆ. ಇಸ್ಕಾನ್ ಪಕ್ಕದಲ್ಲಿ ಡಿ ಬ್ಲಾಕ್ ಪರ್ಲ್ ಹೋಟೆಲ್ ಇದ್ದು, ನಾನ್ ವೆಜ್ ಊಟ ಆರ್ಡರ್ ಮಾಡಿ ಸೇವಿಸುತ್ತಿರುವಾಗಲೇ ಮಕ್ಕಳು ಒಬ್ಬೊಬ್ಬರಾಗಿ ವಾಂತಿ ಮಾಡಲು ಶುರು ಮಾಡಿದ್ದಾರೆ. ಆತಂಕಗೊಂಡ ಪೋಷಕರು ಕೂಡಲೇ ಮೂವರು ಮಕ್ಕಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆ ಹೋಟೆಲ್ ಅವರನ್ನು ವಿಚಾರಿಸಿದಾಗ ಹೋಟೆಲ್ ಸಿಬ್ಬಂದಿ ಗಾಬರಿಗೊಂದು ಇದ್ದ ಬಂದ ಊಟವನ್ನೇ ಬೇರೆ ಕಡೆಗೆ ಸಾಗಿಸಲು ಮುಂದಾಗಿದ್ದರು. ಕೂಡಲೇ ಹೋಟೆಲ್‌ಗೆ ಬಂದಿದ್ದ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುಬ್ರಹ್ಮಣ್ಯ ನಗರ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಮ್ಯಾನೇಜರ್ ಅವರನ್ನು ವಶಕ್ಕೆ ಪಡೆದಿದ್ದು, ಘಟಣೆ ಸಂಬಂಧ ಹೋಟೆಲ್ ಅವರ ವಿರುದ್ಧ ಊಟ ಸೇವಿಸಿ ಅಸ್ವಸ್ಥರಾಗಿದ್ದ ಮಕ್ಕಳ ಪೋಷಕರು ದೂರು ನೀಡಿದ್ದಾರೆ. ಘಟನಾ ಸಂಬಂಧ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
Kshetra Samachara
25/12/2024 12:46 pm