ದೇವನಹಳ್ಳಿ : ಹೆಡ್ ಬುಷ್ ಚಿತ್ರದ ಪ್ರಚಾರಕ್ಕೆ ವಿದೇಶಕ್ಕೆ ತೆರಳಿದ ನಾಯಕ ನಟ ಡಾಲಿ ಧನಂಜಯ್ ಇಂದು ಕೆಂಪೇಗೌಡ ಏರ್ಪೋರ್ಟ್ ಇಂದ ಸಾದಳ್ಳಿ ಟೋಲ್ ಬಳಿಗೆ ಆಗಮಿಸಿದರು.
ಈ ವೇಳೆ ಅಭಿಮಾನಿಗಳು ಹೂವಿನ ಹಾರ ಹಾಕಿ ಭವ್ಯ ಸ್ವಾಗತ ಕೋರಿದರು. ಬೆಲ್ ಬಾಟಂ ಲುಕ್ ಅಲ್ಲಿ ಬಂದ ಡಾಲಿಗೆ ಘೋಷಣೆ ಮೂಲಕ ಅಭಿಮಾನಿಗಳು ಬರಮಾಡಿಕೊಂಡರು.
ಸಾದಹಳ್ಳಿ ಟೋಲ್'ನಿಂದ ಪ್ರೀಡಂ ಪಾರ್ಕ್ ವರೆಗೂ ರೆಟ್ರೊ ಸ್ಟೈಲ್ನಲ್ಲಿ ಡಾಲಿ ಧನಂಜಯ್ ಅಭಿಮಾನಿಗಳ ಜೊತೆ ಚಿತ್ರದ ಬಗ್ಗೆ ಪ್ರಮೋಷನ್ ರ್‍ಯಾಲಿ ನಡೆಸಲು ಆಗಮಿಸಿದರು.
ಹೆಡ್ ಬುಷ್ ಚಿತ್ ಜಯರಾಜ್ ಅವಾತರದಲ್ಲಿ ಡಾಲಿ ಧನಂಜಯ್ ಸಖತ್ತಾಗಿ ಮಿಂಚುತ್ತಿದ್ದರು. ಸ್ವಾಗತದ ನಂತರ ಟೋಲ್ ನಿಂದ ನೂರಾರು ಅಭಿಮಾನಿಗಳ ಜತೆ ರೆಟ್ರೋ ಬೈಕ್'ಗಳಲ್ಲಿ ಪ್ರಯಾಣ
ಮಾಡುತ್ತಾ, ಹೆಡ್ ಬುಷ್ ಚಿತ್ರಕ್ಕೆ ವಿಭಿನ್ನವಾಗಿ ಪ್ರಚಾರದಲ್ಲಿದೆ ಮಾಡ್ತಿರೋ ಡಾಲಿ ಧನಂಜಯ್ ಮತ್ತು ಅಭಿಮಾನಿಗಳು.
ಬೈಕ್, ಆಟೋ ಕಾರುಗಳಲ್ಲಿ ಹೆಡ್ ಬುಷ್ ಪೊಸ್ಟರ್ ಹಿಡಿದು ರ್‍ಯಾಲಿ ಮೂಲಕ ವಿಭಿನ್ನ ಪ್ರಚಾರ ನಡೆಸುತ್ತಿರುವ ಅಭಿಮಾನಿಗಳು. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ ಮತ್ತು ಅಬಿಬಿ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಇದೇ ತಿಂಗಳ ಅಕ್ಟೋಬರ್ 21ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.
PublicNext
07/10/2022 04:19 pm