ಬೆಂಗಳೂರು: ನಗರದಲ್ಲಿ ಮತ್ತೊಂದು ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿದೆ. ಬ್ಯಾಟರಾಯನಪುರ ಠಾಣೆಯಲ್ಲಿ 17 ವರ್ಷದ ಹುಡುಗಿ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಪೋಷಕರು ದೂರು ನೀಡಿದ್ದಾರೆ.
ಬಾಲಕಿಗೆ ಪರಿಚಯ ಇರುವ ಹುಡುಗರೇ ಅಪ್ರಾಪ್ತೆಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಆದ್ರೆ ಬೇರೆ ಬೇರೆ ಸಮಯದಲ್ಲಿ ಯುವತಿಯನ್ನ ಯುವಕರು ಬಳಸಿಕೊಂಡಿದ್ದು, ಯುವತಿಯ ಕೆಲ ಖಾಸಗಿ ಫೋಟೋಗಳನ್ನ ಯುವಕರು ಇಟ್ಟುಕೊಂಡಿರೋ ಬಗ್ಗೆ ಕೂಡ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ಬ್ಯಾಟರಾಯನಪುರ ಪೊಲೀಸರು ತನಿಖೆ ಮುಂದುವರಸಿದ್ದು ಕೆಲ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.
PublicNext
08/10/2022 12:00 pm