ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹ ಹಿನ್ನಲೆ ಹೆಂಡತಿ ತವರು ಮನೆಯಲ್ಲಿ ಇದ್ಳು, ಹೆಂಡತಿಯ ಊರಿಗೆ ಬಂದ ಗಂಡ ಮಾವನ ಜೊತೆ ಕುಡಿಯೋಕ್ಕೆ ಹೋಗಿದ್ದಾನೆ, ಹೆಂಡತಿಗೆ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಿರುವಾಗಲೇ ಮಾವನನ್ನ ಕೊಲೆಗೈದ ಅಳಿಯ ಪರಾರಿಯಾಗಿದ್ದಾನೆ.
ಕೋಲಾರ ಮೂಲದ ಪ್ರತಾಪ್ ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದ ಯುವತಿಯನ್ನ ಮದುವೆಯಾಗಿದ್ದ, ಹೆರಿಗೆ ಕಾರಣಕ್ಕೆ ತವರಿಗೆ ಬಂದಿದ್ದ ಹೆಂಡತಿ ತವರು ಮನೆಯಲ್ಲೇ ಉಳಿದಿದ್ಳು, ಕೌಟುಂಬಿಕ ಕಲಹ ಹಿನ್ನೆಲೆ ತವರು ಮನೆಯಲ್ಲಿದ್ದ ಹೆಂಡತಿ ಒಂದೂವರೆ ವರ್ಷದಿಂದ ಹೆಂಡತಿ ಗಂಡನ ಮನೆಗೆ ಹೋಗಿರಲಿಲ್ಲ. ಮಗುವನ್ನ ನೋಡಲು ಅವಕಾಶ ಕೊಟ್ಟಿರಲಿಲ್ಲ ಇದರಿಂದ ಹೆಂಡತಿ ಮನೆಯವರ ಮೇಲೆ ಪ್ರತಾಪ್ ಗೆ ಕೋಪ ಇತ್ತು, ತನ್ನ ಮಗುವನ್ನ ನೋಡಲೆಂದ್ದು ನಿನ್ನೆ ಪ್ರತಾಪ್ ಆರೂಢಿ ಗ್ರಾಮಕ್ಕೆ ಬಂದಿದ್ದ.
ಮಗುವನ್ನ ನೋಡಲು ಬಂದಿದ್ದ ಪ್ರತಾಪ್ ಗೆ ಮಗುವನ್ನ ಹೆಂಡತಿ ಮನೆಯವರು ಮಗುವನ್ನು ತೋರಿಸಿರಲಿಲ್ಲ, ಇದರಿಂದ ಕೋಪಗೊಂಡ ಪ್ರತಾಪ್ ಮಾವ ಸುಬ್ಬರಾಯಪ್ಪನನ್ನ ಕರ್ಕೊಂಡು ಕುಡಿಯಲು ಹೋಗಿದ್ದಾನೆ, ಸಂಜೆಯಾದ್ರು ಅಪ್ಪ ಮನೆಗೆ ಬರದಿದ್ದಾಗ ಹೆಂಡತಿ ಗಂಡನಿಗೆ ಪೋನ್ ಮಾಡಿದ್ದಾಳೆ, ಪೋನ್ ನಲ್ಲಿ ಹೆಂಡತಿ ಜೊತೆ ಮಾತನಾಡುತ್ತಿರುವಾಗಲೇ ಮಾವನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.
ಗಂಡನ ವರ್ತನೆಯಿಂದ ಅನುಮಾನಗೊಂಡ ಹೆಂಡತಿ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾಳೆ, ಆಕೆಯ ಸಂಬಂಧಿಕರು ಸುಬ್ಬರಾಯಪ್ಪ ಎಲ್ಲಿ ಎಂದು ಕೇಳಿದಾಗ ಕೊಲೆ ಮಾಡಿದ್ದಾಗಿ ಹೇಳಿದಲ್ಲದೆ ಸಾಕ್ಷಿಯಾಗಿ ಸುಬ್ಬರಾಯಪ್ಪನ ಮೃತದೇಹದ ಪೋಟೋವನ್ನ ವಾಟ್ಸಪ್ ನಲ್ಲಿ ಕಳಿಸಿ ಪರಾರಿಯಾಗಿದ್ದಾನೆ, ಕೊಲೆಯಾದ ಸ್ಥಳದ ಗೊತ್ತಾಗದ ಹಿನ್ನಲೆ ಸುಬ್ಬರಾಯಪ್ಪನ ಸಂಬಂಧಿಕರು ಹೊಸಹಳ್ಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ, ದೊಡ್ಡಬೆಳವಂಗಲ, ಹೊಸಹಳ್ಳಿ ಮತ್ತು ನೆಲಮಂಗಲ ಪೊಲೀಸರ ಸಹಾಯದಿಂದ ಶವವನ್ನ ಪತ್ತೆ ಮಾಡಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪಿ ಗಾರ್ಡನ್ ಬಳಿ ಶವ ಪತ್ತೆಯಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
PublicNext
06/10/2022 10:48 pm