ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ ಯುವಕನಿಗೆ ಬಲವಂತವಾಗಿ 'ಕತ್ನಾ' ಪ್ರಕರಣ ಬೆಂಗಳೂರಿಗೆ ವರ್ಗಾವಣೆ

ಬೆಂಗಳೂರು: ಹಿಂದೂ ಯುವಕನಿಗೆ ಮತಾಂತರ ಮಾಡಿದ ಪ್ರಕರಣ ಹುಬ್ಬಳ್ಳಿಯಿಂದ ದಾಖಲಾಗಿದ್ದ ಬೆಂಗಳೂರಿನ ಬನಶಂಕರಿ ಠಾಣೆಗೆ ಟ್ರಾನ್ಸ್ಫರ್ ಆಗಿದೆ‌.

ಹುಬ್ಬಳ್ಳಿ ಎಪಿಎಂಸಿಯ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶ್ರೀಧರ್ ಎಂಬಾತನನ್ನ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಕ್ಕೆ ಮುಂದಾಗಿದ್ದ ಆರೋಪಿಗಳು ಬಲವಂತವಾಗಿ ಇಸ್ಲಾಂ ಧರ್ಮದಂತೆ 'ಕತ್ನಾ'‌ ಮಾಡಿಸಿದ್ರು. ಬಲವಂತದ ಮತಾಂತರ, ಕತ್ನಾ ಪ್ರಕರಣದಲ್ಲಿ ಕಾಂಗ್ರೆಸ್ ನ ಮಾಜಿ ಕಾರ್ಪೋರೇಟರ್ ಅನ್ಸರ್ ಪಾಷ ಕೂಡ ಆರೋಪಿಯಾಗಿದ್ದು ಅನ್ಸರ್ ಪಾಷಾನ ಸಂಬಂಧಿ ನಯಾಝ್ ಪಾಷಾ ಕೂಡ ಎ3 ಆರೋಪಿಯಾಗಿದ್ದಾನೆ.

ಖಬರಿಸ್ತಾನ್ ಮಸೀದಿಯ ಆಡಳಿತ ಮಂಡಳಿಯಲ್ಲಿರುವ ನಯಾಝ್ ಪಾಷಾ ಇಸ್ಲಾಂ ಧರ್ಮದ ಭೋದನೆ ಮಾಡಿ, ಮರ್ಮಾಂಗದ 'ಕತ್ನಾ' ಮಾಡಿದಲ್ಲದೆ ದನದ ಮಾಂಸವನ್ನ ಬಲವಂತವಾಗಿ ತಿನ್ನಿಸಿರುವ ಆರೋಪ ಕೇಳಿ ಬಂದಿದೆ‌. ಶ್ರೀಧರನಿಗೆ ಮೊಹಮ್ಮದ್ ಸಲ್ಮಾನ್ ಎಂದು ನಾಮಕರಣ ಮಾಡಿ ಬಾಂಡ್ ಪೇಪರ್ ಬರೆಸಿಕೊಂಡಿದ್ದರಂತೆ.

ನಂತರ ಬನಶಂಕರಿಯ ಮಸೀದಿಗೆ ಕರೆ ತಂದು ಅಕ್ರಮವಾಗಿ ಗೃಹಬಂಧನದಲ್ಲಿಟ್ಟಿದ್ದು, ಈ ವೇಳೆ ಶ್ರೀಧರ್ ಪ್ರತಿಭಟಿಸಿದಾಗ ಪರವಾನಿಗೆ ಇರುವ ಗನ್ ಇಟ್ಟು ಭಯೋತ್ಪಾದಕನಂತೆ ಬಿಂಬಿಸಿ ವಿಡೀಯೋ ಮಾಡಿ ಬೆದರಿಸಿದ್ರಂತೆ. ನಂತರ ಮತಾಂತರದ ಬಗ್ಗೆ ಬರೆಸಿಕೊಂಡು ಇದರ ಬಗ್ಗೆ ಏನಾದರು ಹೊರಗಡೆ ತಿಳಿದರೆ ಭಯೋತ್ಪಾದಕನಂತೆ ಬಿಂಬಿಸಿದ ವಿಡಿಯೋವನ್ನ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದ್ರ ಜೊತೆಗೆ ವರ್ಷಕ್ಕೆ ಮೂರು ಜನರನ್ನ ಕರೆ ತಂದು ಮತಾಂತರ ಮಾಡಿಸಬೇಕೆಂದು ಒತ್ತಾಯ ಕೂಡ ಮಾಡಿದ್ರಂತೆ. ಇನ್ನು ಹಣಕಾಸಿನ ತೊಂದರೆ ಬಗ್ಗೆ ಎ1 ಆರೋಪಿ ಅತ್ತಾವರ ರೆಹಮಾನ್ ಬಳಿ ಹೇಳಿಕೊಂಡಿದ್ದ ಶ್ರೀಧರ್.

ಆರೋಪಿ ಅಜಿಸಾಬ್ ಹಿಂದೂ ದೇವರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿ ಇವರನ್ನೆಲ್ಲಾ ದೇವರು ಅಂತಾ ಅಂತಾ? ಮಾತುಗಳನ್ನಾಡಿದ್ದನಂತೆ. ಇಸ್ಲಾಂ ಧರ್ಮದ ಬಗ್ಗೆ ಭೋದನೆ ಮಾಡಿ ಆ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮಾಡಿ ಶ್ರೀಧರ್ ಮೊಬೈಲ್‌ಅನ್ನು ಪಡೆದು ಒಂದು ವಾರಗಳ ಕಾಲ ಅಕ್ರಮ ಬಚ್ಚಿಟ್ಟು, ಬಲವಂತವಾಗಿ ಕತ್ನಾ ಮಾಡಿಸಿರುವ ಕೃತ್ಯ ಆರೋಪವಿದೆ. ಸದ್ಯ ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಗೆ ಹುಬ್ಬಳ್ಳಿಯ ದೂರು ವರ್ಗಾವಣೆಯಾಗಿದ್ದು, ಡಿಸಿಪಿ ಕೃಷ್ಣಕಾಂತ್ ನೇತೃತ್ವದಲ್ಲಿ ತನಿಖೆ ಮುಂದುವರಿದೆ.

Edited By : Nagaraj Tulugeri
PublicNext

PublicNext

05/10/2022 05:09 pm

Cinque Terre

14.19 K

Cinque Terre

3

ಸಂಬಂಧಿತ ಸುದ್ದಿ