ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗ್ರಾಮಗಳಲ್ಲಿ ಕುರಿಗಳ್ಳರ ಹಾವಳಿ!; ರೈತ ಹೈರಾಣ, ಸ್ಥಳೀಯಾಡಳಿತ ಮೌನ

ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಆಗರ. ದೊಡ್ಡಿಪಾಳ್ಯ, ಗಂಗಸಂದ್ರ, ಚಿಕ್ಕೆಗೌಡನಪಾಳ್ಯ, ಭೀಮನಕುಪ್ಪೆ ಹೀಗೆ ಹಲವಾರು ಪ್ರದೇಶಗಳಲ್ಲಿ ಕುರಿ ಕಳ್ಳತನ ಹೆಚ್ಚಾಗಿದೆ! ರಸ್ತೆ ಪಕ್ಕದ ಹೊಲಗಳಲ್ಲಿ ಕಟ್ಟಿ ಹಾಕಿದ ಕುರಿಗಳನ್ನ ದ್ವಿಚಕ್ರ ವಾಹನಗಳಲ್ಲಿ ಬರುವ ಖದೀಮರು ಅಪಹರಿಸುತ್ತಿದ್ದಾರೆ.

ರೈತರು ಕೃಷಿ ಜೊತೆಗೆ ಹಸು- ಕುರಿಗಳನ್ನ ಸಾಕಿ ಕೊಂಡಿರುತ್ತಾರೆ. ವ್ಯವಸಾಯ ಮಾಡ್ತಾ, ಪಶುಗಳನ್ನು ಹೊಲಗಳಲ್ಲಿ ಹುಲ್ಲು ಮೇಯಲು ಬಿಟ್ಟಿರುತ್ತಾರೆ. ಆದ್ರೆ, ಇದನ್ನೇ ಗಮನಿಸುತ್ತಿರುವ ಕಳ್ಳರು ಕುರಿಗಳನ್ನ ಎತ್ಕೊಂಡು, ಎಸ್ಕೇಪ್ ಆಗಿದ್ದಾರೆ.

ನಗರ ಪಂಚಾಯತಿ ಭಾಗ ದೊಡ್ಡಿಪಾಳ್ಯ ಹಾಗೂ ಗಂಗಸಂದ್ರದಲ್ಲಿ ಸರಗಳ್ಳತನ, ಮನೆ ಕಳ್ಳತನ ನಡೆಯುತ್ತಾ ಇದ್ರೂ ಇಲಾಖೆ ತಲೆ ಕೆಡಿಸಿಕೊಳ್ತಿಲ್ಲ. ಕುರಿ ಸಾಕಾಣಿಕೆಯೇ ನಮ್ಮ ಹೊಟ್ಟೆ ಪಾಡು. ಆದ್ರೆ, ಅದನ್ನೇ ಎತ್ಕೊಂಡೋಗಿದ್ದಾರೆ. ನಾವೇನು ಮಾಡೋದು ಅಂತಾರೆ ರೈತರು. ಈ ರೈತರೆಲ್ಲ ಒಂದು ಕಡೆ ಅತಿವೃಷ್ಟಿಯಿಂದ ಕಂಗಾಲಾಗಿದ್ರೆ, ಮತ್ತೊಂದು ಕಡೆ ಕುರಿಕಳ್ಳರ ಕಾಟದಿಂದ ನಲುಗುತ್ತಿದ್ದಾರೆ.

ಊರಿನಲ್ಲಿ ಎಲ್ಲೂ ಸಹ ಸಿಸಿ‌ ಕ್ಯಾಮೆರಾಗಳಿಲ್ಲ. ಮಾಂಗಲ್ಯ ಸರಗಳ್ಳರ ಹಾವಳಿಯೂ ಹೆಚ್ಚಾಗಿದೆ. ಇವತ್ತು‌ ಕುರಿಗಳನ್ನ ಕಳವು ಮಾಡಿದ್ದಾರೆ. ಮುಂದೆ ಮಕ್ಕಳನ್ನೂ ಕಳ್ಳತನ ಮಾಡಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ? ಅಧಿಕಾರಿಗಳು ಎಚ್ಚೆತ್ಕೊಳ್ಬೇಕಿದೆ. ಮಧ್ಯಾಹ್ನ ವೇಳೆಯಲ್ಲಿಯೂ ಪೊಲೀಸ್ ಬೀಟ್ ಹಾಕಿ, ಸಿಸಿ ಕ್ಯಾಮೆರಾಗಳನ್ನ ಅಳವಡಿಕೆ ಮಾಡೋದು ಒಳ್ಳೆಯದು.

- ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Manjunath H D
PublicNext

PublicNext

30/09/2022 06:24 pm

Cinque Terre

43.01 K

Cinque Terre

1