ಆನೇಕಲ್: ಪತ್ರಕರ್ತನ ಮನೆಗೆ ನುಗ್ಗಿ ದಾಂಧಲೆ ನಡೆಸಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮಾಸ್ತನಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆ ನಡೆಸುತ್ತಿರುವ ದೃಶ್ಯಾವಳಿಗಳು ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿವೆ. ಇನ್ನು ಹಲ್ಲೆ ನಡೆಸುತ್ತಿರುವ ದೃಶ್ಯಾವಳಿಗಳು ಪಬ್ಲಿಕ್ ನೆಕ್ಸ್ಟ್‌ಗೆ ಲಭ್ಯ
ಇನ್ನು ವೀರಭದ್ರ ಸ್ವಾಮಿ ಹೆನ್ನಾಗರ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಅಕ್ರಮದ ಬಗ್ಗೆ ಸುದ್ದಿ ಮಾಡಿದ್ರಂತೆ,ಜತೆಗೆ ರಾಜಾಪುರ ಸರ್ವೆ ನಂಬರ್ 67/3 ರಲ್ಲಿ ರೈತರ ಜಮೀನನ್ನ ಬಿಎಂಆರ್‌ಡಿ ಜಾಗ ಅಂತ ಬಾಬರೆಡ್ಡಿ ಗಲಾಟೆ ಮಾಡಿ ಜಾಗ ಬಿಡುವಂತೆ ಧಮ್ಕಿ ಹಾಕಿದ್ರಂತೆ. ಈ ಬಗ್ಗೆ ಪತ್ರಕರ್ತ ರೈತರ ಪರವಾಗಿ ಸುದ್ದಿ ಮಾಡಿದ್ರಂತೆ. ಈ ವಿಚಾರವಾಗಿ ತಹಶಿಲ್ದಾರ್ ಗಮನಕ್ಕೆ ತರಲುಬಂದಾಗ ನಿನ್ನೆ ಬುಧವಾರ ಸಂಜೆ 5:30ಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಬಂದಾಗ ಆ ವೇಳೆ ಬಾಬುರೆಡ್ಡಿ , 'ಏನೋ ನನ್ನ ವಿರುದ್ಧನಾಗಿ ಸುದ್ದಿ ಮಾಡ್ತೀಯಾ ಆರ್‌ಟಿಐ ಅರ್ಜಿ ಹಾಕಿ ತೊಂದರೆ ಕೊಡ್ತೀಯಾ?' ಅಂತ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಏಕಾಏಕಿ ಪತ್ರಕರ್ತನ ಮೇಲೆ ತಹಶೀಲ್ದಾರ್ ಕಚೇರಿಯಲ್ಲಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಈ ಬಗ್ಗೆ ಇನ್ಸ್ಪೆಕ್ಟರ್ ಚಂದ್ರಪ್ಪ ಕಂಪ್ಲೇಂಟ್ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
PublicNext
30/09/2022 09:18 am