ಬೆಂಗಳೂರು: ಗಾಂಜಾ ಮತ್ತಿನಲ್ಲಿ ಗಲಾಟೆ ಮಾಡ್ತಿದ್ದವರನ್ನ ಪ್ರಶ್ನಿಸಿದ್ದಕ್ಕೆ ಮನೆಯವರ ಮೇಲೆ ಹುಡುಗರು ಗಲಾಟೆ ಮಾಡಿದ್ದಾರೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾರ್ ವಾಶ್ ಮಾಡುವ ಯುವಕರಿಂದ ಗಲಾಟೆ ನಡೆದಿದೆ.
ರಾತ್ರಿಯಾದ್ರೆ ಸಾಕು, ಗಾಂಜಾ ಹೊಡೆದು ಕಿರಿಕ್ ಮಾಡೋ ಇವ್ರು, ಸೆ.20ರಂದು ಗಲಾಟೆ ಮಾಡಿದ್ರು. ರಾತ್ರಿ ವೇಳೆ ಕಾಂಪೌಡ್ ಒಳಭಾಗದಲ್ಲಿ ಓಡಾಡುವ ಈ ಯುವಕರಲ್ಲಿ ಮನೆ ಮಾಲೀಕರು "ಇಲ್ಲಿ ಯಾಕೆ ಓಡಾಡಿ, ಗಲಾಟೆ ಮಾಡ್ತೀರಾ!? ಗಾಂಜಾ ವಾಸನೆ ಬರ್ತಾಯಿದೆ" ಅಂತ ಕೇಳಿದ್ರು.
ಇದಕ್ಕೆ "ನಮ್ಮನ್ನೇ ಪ್ರಶ್ನೆ ಮಾಡ್ತೀರಾ?" ಅಂತಾ ಗಲಾಟೆ ಮಾಡಿ ಸಿಕ್ಕ ಸಿಕ್ಕ ವಸ್ತುವಿನಲ್ಲಿ ಹೊಡೆದು ಹಲ್ಲೆ ನಡೆಸಿದ್ದಾರೆ.
ಪೊಲೀಸ್ರಿಗೆ ದೂರು ನೀಡಿದ್ರೂ ಪ್ರಕರಣ ದಾಖಲಿಸದೆ ರಾಜಿ ಸಂಧಾನ ಮಾಡಿರೋ ಆರೋಪ ಕೇಳಿ ಬಂದಿದೆ. ಜಗಳದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
PublicNext
27/09/2022 02:38 pm