ಬೆಂಗಳೂರು: ಅಂದು ನೊಂದ ಮಹಿಳೆಗೆ ಸಹಾಯ ಮಾಡಿದ ಸಂಘಟನೆ ಅಧ್ಯಕ್ಷ ಇಂದು ಅದೇ ಮಹಿಳೆಗೆ ಹಣಕ್ಕಾಗಿ ಕಿರುಕುಳ ನೀಡಿ ಜೈಲು ಪಾಲಾಗಿದ್ದಾನೆ. ಹಣಕ್ಕಾಗಿ ದಿಕ್ಕಿಲ್ಲದೆ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಆರೋಪಿ ಪ್ರಕಾಶ ಮೂರ್ತಿ ಸದ್ಯ ಜೈಲು ಪಾಲಾಗಿದ್ದು, ಪ್ರಕಾಶ ಭಾರತೀಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷ ಅಂತ ಬಿಂಬಿತನಾಗಿದ್ದ.
ಮಾನವ ಹಕ್ಕುಗಳ ರಕ್ಷಣೆ ಮಾಡ್ತೇನೆ ಅಂತ ಅಮಾಯಕರಿಗೆ ಸಹಾಯ ನೆಪದಲ್ಲಿ ಸುಲಿಗೆ ಮಾಡ್ತಿದ್ದ ಇವ್ನ ಕಥೆ ಕೇಳಿದ್ರೆ, ಸಮಸ್ಯೆ ಅಂತ ಇನ್ನೂ ಮುಂದೆ ಯಾವ ಹೋರಾಟಗಾರರ ಬಳಿಯು ಯಾರೂ ಹೋಗಲ್ಲ. ಗಂಡ ಸಿಕ್ಕಾಪಟ್ಟೆ ಕಿರುಕುಳ ನೀಡ್ತಿದ್ದಾನೆ ಅಂತ ಪ್ರತಿಭಾ ಎಂಬಾಕೆ ಬೆಳ್ಳಂದೂರು ಪೊಲೀಸ್ ಠಾಣೆಗೆ ಹೋಗಿದ್ಲು. ಅಲ್ಲಿ ಪೊಲೀಸ್ರು ಗಂಡ ಹೆಂಡ್ತಿ ಮ್ಯಾಟ್ರು ಅಂತ ಬುದ್ಧಿವಾದ ಹೇಳಿ ಎನ್ಸಿಆರ್ ಮಾಡಿದ್ರು. ಇಷ್ಟಾದ್ರೂ ಸುಮ್ಮನಿರ ಪ್ರತಿಭಾ ಪತಿ ಜನರ್ಧಾನ ಆಸ್ತಿಗಾಗಿ ಪ್ರತಿಭಾಳಿಗೆ ಇನ್ನಿಲ್ಲದ ಹಿಂಸೆ ನೀಡಿದ್ದ. ಇಷ್ಟಾದ್ರೂ ಎಫ್ಐಆರ್ ಮಾಡದ ಪೊಲೀಸರ ವಿರುದ್ಧ ಅಸಹನೆ ಹೊರಹಾಕ್ತಿದ್ದ ಪ್ರತಿಭಾಗೆ ಸಂಘಟನೆ ಹೆಸರಿನಲ್ಲಿ ಪಕ್ಕದ ಮನೆ ರಾಣಿ ಮೂಲಕ ಪ್ರಕಾಶ್ ಮೂರ್ತಿ ಪರಿಚಯವಾಗಿದ್ದ.
ತಾನೊಬ್ಬ ಮಹಾನ್ ಹೋರಾಟಗಾರ. ನಿನೊಬ್ಬಳೆ ಸ್ಟೇಷನ್ಗೆ ಹೋದ್ರೆ ಏನು ಆಗಲ್ಲ. ನಾಳೆ ನನ್ನೊಂದಿಗೆ ಬಾ ಅಂತ ಕರೆದುಕೊಂಡು ಸೀದಾ ಕಮಿಷನ್ ಕಚೇರಿ ಬಾಗಿಲು ತಟ್ಟಿದ್ದ. ಕಮಿಷನರ್ ಹೇಳಿದ್ದಕ್ಕೋ ಏನೋ ಬೆಳ್ಳಂದೂರು ಪೊಲೀಸ್ರು ಪ್ರತಿಭಾ ಗಂಡನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಪ್ರತಿಭಾಗೆ ಹಿಂಸೆ ನೀಡ್ತಿದ್ದ ಜನಾರ್ಧನ್ ಬಂಧಿಸಿ ಜೈಲಿಗೆ ಕಳಿಸಿದ್ದ ಪೊಲೀಸ್ರು. ಅಷ್ಟೇ ಅಲ್ಲದೇ ಜನರ್ದಾನ್ಗೆ ಅತ್ತೆ ಕೊಡಿಸಿದ್ದ ಕಾರು, ಆಭರಣಗಳನ್ನ ಪ್ರತಿಭಾಗೆ ಪ್ರಕಾಶ್ ಕೊಡಿಸಿದ್ದ.
ಅತ್ತ ಪ್ರತಿಭಾ ಗಂಡ ಜೈಲಿಗೆ ಹೋಗ್ತಿದ್ದಂತೆ ಸಂಘಟನೆಯ ಅಸಲಿ ಮುಖ ಪ್ರದರ್ಶನ ಪ್ರಕಾಶ್ ನಿನಗೆ ಕೇಸ್ ದಾಖಲಿಸಲು, ನಿನ್ನ ಗಂಡನ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯ ಮಾಡಿದ್ದು ನಾನು, ನನಗೆ ಐದು ಲಕ್ಷ ಹಣ ನೀಡುವಂತೆ ಒತ್ತಾಯ ಹಾಕಿದ್ದ. ಇದಕ್ಕೆ ಪ್ರತಿಯಾಗಿ ಹಾಗೋ ಹೀಗೋ ಮಾಡಿ ಪ್ರತಿಭಾ ತಾಯಿ ಸುಮಾರು 1.75 ಲಕ್ಷ ಹಣ ಕೊಟ್ಟಿದ್ರು. ಇಷ್ಟಕ್ಕೆ ಸುಮ್ಮನಾಗದ ಪ್ರಕಾಶ ಹಣ ನೀಡದಿದ್ರೆ ನಿನ್ನ ಗಂಡನ ಪರ ನಿಂತು ನಿಮ್ಮ ಮೇಲೆ ಕೇಸ್ ಹಾಕಿಸೋದಾಗಿ ಬೆದರಿಕೆ ಹಾಕಿದ್ದ ಮತ್ತಷ್ಟು ಹಣಕ್ಕೆ ಕಿರುಕುಳ ನೀಡ್ತಿದ್ದ. ಪ್ರಕಾಶ ಹಿಂಸೆ ತಾಳಲಾರದೇ ಪ್ರತಿಭಾ ತಾಯಿಯಿಂದ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ದೂರು ದಾಖಲಿಸಿಕೊಂಡ ಪೊಲೀಸ್ರಿಂದ ಆರೋಪಿ ಪ್ರಕಾಶ್ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
Kshetra Samachara
24/09/2022 10:51 am