ನಗರದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಹೆಚ್ಚಾಗ್ತಿದೆ ಎಂಬುದಕ್ಕೆ ಈಗ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ . ಹೆಣ್ಣೂರು , ಥಣಿಸಂದ್ರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು ಕಿಡಿಗೇಡಿಗಳು ಅಂಗಡಿಯೊಂದಕ್ಕೆ ನುಗ್ಗಿ ಅಲ್ಲಿ ಲಾಂಗ್ ಬೀಸಿ ದುಡ್ಡು ಕೊಡೋದಕ್ಕೆ ಬೆದರಿಕೆ ಹಾಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಫಣಿಲಾಲ್ ಎಂಬುವವರ ಫ್ಲೈ ವುಡ್ ಅಂಗಡಿಗೆ ನುಗ್ಗಿದ ಪುಂಡರು ಹಣ ನೀಡುವಂತೆ ಧಮ್ಕಿ ಹಾಕಿದ್ದಾರೆ. ಹಣ ಕೊಡಲು ನಿರಾಕರಿಸಿದಕ್ಕೆ ಎರಡು ಬಾರಿ ಲಾಂಗ್ ಬೀಸಿ ದುಷ್ಕೃತ್ಯ ಮೆರೆದಿದ್ದಾರೆ. ಅಷ್ಟೆ ಅಲ್ಲದೆ ರಸ್ತೆಯಲ್ಲಿ ಬಟ್ಟೆ ತೆಗೆದುಕೊಂಡು ಬರ್ತಿದ್ದ ಯುವಕನ ಮೇಲೆ ಕೂಡ ಲಾಂಗ್ ಬೀಸಿದ್ದಾನೆ. ಇದಕ್ಕೆ ಪ್ರತಿರೋಧ ಒಡ್ಡಿದ ಯುವಕ ಚೇರ್ ಎಸೆದು ಎದರಿಸಲು ಮುಂದಾಗಿದ್ದಾನೆ. ಸಾರಾಯಿಪಾಳ್ಯದ ಕೆಲ ಪುಂಡರಿಂದ ಈ ಕೃತ್ಯ ನಡೆದಿದ್ದು, ಇನ್ನು ಈ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
PublicNext
20/09/2022 05:42 pm