ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗ್ರಾಮದ ಗಂಗಾಧರ್ (26) ಎಂಬ ವ್ಯಕ್ತಿ, ಕಲ್ಲುಕ್ವಾರಿಯ ಹೊಂಡದಲ್ಲಿ ಬಿದ್ದು ನೆನ್ನೆ ಸಂಜೆ ಮೃತಪಟ್ಟಿದ್ದಾನೆ. ಗಂಗಾಧರ್ ಸಾದಳ್ಳಿಯ ಶ್ರೀರಾಮ್ ಗ್ರಾನೈಟ್ ನಲ್ಲಿ ಸುಪರ್ವೈಸರ್ ಆಗಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಸ್ನೇಹಿತರ ಜೊತೆಯಲ್ಲಿ ಕ್ವಾರಿ ಹೊಂಡದ ಬಳಿ ತೆರಳಿದ್ದ ವೇಳೆ ದುರಂತ ನಡೆದಿದೆ.
ನೆನ್ನೆ ಸಂಜೆ ಘಟನೆ ನಡೆದಿದ್ದು, ಇಂದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ದೇಹಕ್ಕಾಗಿ ಶೋಧಾಕಾರ್ಯ ನಡೆಸಿದ್ದರು. ಇಂದು ಮದ್ಯಾಹ್ನ ಮೃತದೇಹ ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಚಿಕ್ಕಜಾಲ ಪೊಲೀಸರು ಪರಿಶೀಲನೆ ಮುಂದುವರೆಸಿದ್ದಾರೆ. ದುರಂತ ಸಂದರ್ಭ ಸ್ಥಳದಲ್ಲಿ ಎಷ್ಟು ಜನ ಸ್ನೇಹಿತರಿದ್ದರು. ಏತಕ್ಕಾಗಿ ತೆರಳಿದ್ದರು, ಈ ವೇಳೆ ಗುಂಪಲ್ಲಿದ್ದವರು ಯಾರಾದರೂ ಕುಡಿದಿದ್ದರೆ, ಕುಡಿದ ನಶೆಯಲ್ಲೇನಾದರು, ದುರಂತ ನಡೆದಿದೆಯೇ ಎಂಬುದರ ಬಗ್ಗೆ ಪೊಲೀಸರಿಂದ ಹೆಚ್ಚಿನ ತನಿಖೆ ಮುಂದುವರೆದಿದೆ.
PublicNext
19/09/2022 02:45 pm