ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ವಿಚಾತಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಕಾನ್ಸ್‌ಟೇಬಲ್ ಶಿವಕುಮಾರ್ ಮೂರು ಲಕ್ಷ ಹಣ ವಸೂಲಿ ಮಾಡಿರುವ ಕೇಳಿ ಬಂದಿದೆ. ತಮ್ಮ ಠಾಣ ವ್ಯಾಪ್ತಿ ಬಿಟ್ಟು ಸಹಕಾರ ನಗರದ ಉದ್ಯಮಿಗೆ ಬೆದರಿಸಿ ಹಣ ಪೀಕಿರುವ ಆರೋಪ ಕೇಳಿ ಬಂದಿದೆ.
ಸಈ ಕುರಿತು ಈಶಾನ್ಯ ವಿಭಾಗ ಡಿಸಿಪಿಗೆ ಸಹಕಾರ ನಗರದ ಉದ್ಯಮಿ ಯೋಗೇಶ್ ದೂರು ನೀಡಿದ್ದಾರೆ. ಹಾಲು ಉದ್ಯಮಿಯಾಗಿರುವ ಯೋಗೇಶ್‌ಗೆ ಕ್ರಿಕೆಟ್ ಬೆಟ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಹೆದರಿಸಿ ಸದಾಶಿವನಗರ ಎಸ್ ಬಿ ಕಾರ್ಯ ನಿರ್ವಹಿಸುತ್ತಿರುವ ಪಿಸಿ ಶಿವಕುಮಾರ್ ಬೆದರಿಸಿ ಮೂರು ಲಕ್ಷ ಹಣ ವಸೂಲಿ ಮಾಡಿರೋ ಆರೋಪ ಕೇಳಿ ಬಂದಿದೆ. ಈ ದೂರಿನ್ವಯ ಡಿಸಿಪಿ ಅನೂಪ್ ಶೆಟ್ಟಿ ಯಲಹಂಕ ಎಸಿಪಿಗೆ ದೂರಿನ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿಲಾಗಿದೆ ಎಂದು ಡಿಸಿಪಿ ಅನೂಪ್ ಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಶಿವಕುಮಾರ್ ಪ್ರಭಾವಿ ರಾಜಕಾರಣಿಯಿಂದ ತನಿಖೆ ನಡೆಸಿ ತನ್ನ ವಿತುದ್ಧಕ್ರಮ ಕೈಗೊಳ್ಳದಂತೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಶಿವಕುಮಾರ್ ಭಾತ್ಮಿದಾರನ ಮಾಹಿತಿ ಮೇರೆಗೆ ಸಹಾಕರನಗರಕ್ಕೆ ತೆರಳಿ ಬೆಟ್ಟಿಂಗ್ ಕೇಸ್ ವಿಚಾರಕ್ಕೆ ಹೋಗಿದ್ರು. ಆದ್ರೆ ಭಾತ್ಮಿದಾರ ಮಾಹಿ ಕೊಟ್ಟಿರಲಿಲ್ಲ ಹಣದ ವ್ಯವಹಾರ ತನಿಖೆ ನಂತರ ಅಷ್ಟೇ ಗೊತ್ತಾಗಬೇಕಿದೆ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ತಮ್ಮ ಡಿವಿಷನ್ ಬಿಟ್ಟು ಬೇರೆ ಡಿವಿಷನ್ ನಲ್ಲಿ ಕೇಸ್ ವಿಚಾರಕ್ಕೆ ಎಸ್ ಬಿ ಕಾನ್ಸ್ಟೇಬಲ್ ಹೋಗಿದ್ರಾ? ಅಥವಾ ನಿಜವಾಗ್ಲೂ ಅಧಿಕಾರ ಬಳಸಿ ಹಣ ವಸೂಲಿ ಮಾಡಿದ್ರ ಅನ್ನೋದು ತನಿಖೆಯಿಂದ ಗೊತ್ತಾಗ ಬೇಕಿದೆ.
PublicNext
18/09/2022 10:16 pm