ಬೆಂಗಳೂರು : ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ ಮೂಲಕ ಅಬುದಾಬಿಗೆ ಅಕ್ರಮವಾಗಿ ಹಣ ಸಾಗಾಣೆ ಮಾಡ್ತಿದ್ದ ವೇಳೆ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ. ಏರ್ಪೋಟ್ ಡಿಆರ್ ಐ ಟೀಂ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಪ್ರಕರಣ ಪತ್ತೆಯಾಗಿದೆ.
ಒಟ್ಟು 45 ಸಾವಿರ ಯುಎಸ್ ಡಾಲರ್ ಮತ್ತು 185 ಯುಎಇ ಕರೆನ್ಸಿ ಅಧಿಕಾರಿಗಳ ವಶವಾಗಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಒಟ್ಟು 35ಲಕ್ಷ 45 ಸಾವಿರದ 385 ರೂಪಾಯಿ ವಿದೇಶಿ ಹಣ ಎನ್ನಲಾಗಿದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.
Kshetra Samachara
17/09/2022 12:24 pm