ಬೆಂಗಳೂರು: ನಾಯಿ ಸಾಕೋ ವಿಚಾರಕ್ಕೆ ಅತ್ತೆ ಮಾವನಜೊತೆ ಜಗಳ ಮಾಡಿಕೊಂಡು ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ. ಮೂರು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು,ತಾಯಿ ದಿವ್ಯಾ ಹಾಗೂ ಮಗಳು ಒಂದೇ ಫ್ಯಾನಿನಲ್ಲಿ ನೇಣು ಹಾಕಿಕೊಂಡಿದ್ದಾರೆ. ದಿವ್ಯಾ ಉಸಿರಾಟ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದಳು.ದಿವ್ಯಾ ಮನೆಯಲ್ಲಿ ನಾಯಿ ಸಾಕುತ್ತಿದ್ದರು ಮನೆಯಲ್ಲಿ ನಾಯಿ ಇದ್ದರೆ ಕಾಯಿಲೆ ವಾಸಿಯಾಗಲ್ಲ ಅಂತ ವೈದ್ಯರು ಹೇಳಿದ್ರು.
ಹೀಗಾಗಿ ನಾಯಿಯನ್ನ ಯಾರಿಗಾದ್ರು ನೀಡಿ ಎಂದು ಅತ್ತೆ ಮಾವನಿಗೆ ದಿವ್ಯಾ ಹೇಳಿದ್ಳು.ಆದರೆ ನಾಯಿಯನ್ನ ಮನೆಯಿಂದ ಅತ್ತೆ ಮಾವ ಒಪ್ಪಿರಲಿಲ್ಲ.ಇದೇ ವಿಚಾರಕ್ಕೆ ದಿವ್ಯಾ ಹಾಗೂ ಅತ್ತೆ ಮಾವನ ನಡುವೆ ಗಲಾಟೆ ನಡೆದು ಇದ್ರಿಂದ ಮನನೊಂದು ಆತ್ಮಹತ್ಯೆ ದಿವ್ಯಾ ಹಾಗೂ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
PublicNext
15/09/2022 12:47 pm