ಬೆಂಗಳೂರು : ಪ್ರೇಮಕುಮಾರಿ ಮತ್ತು ಚೇತನ್ ರಾಜಮಾಣಿಕ್ಯ ಡೆವಲಪರ್ಸ್ ಕಂಪನಿ ಪ್ರಾರಂಭಿಸಿ ಸೈಟ್ ಬಿಜಿನೆಸ್ ಮಾಡ್ತಿದ್ದರು. ನಂತರ ಬೇರ್ಪಟ್ಟು ಚೇತನ್ ಹೆಂಡತಿ ರೂಪ ಜೊತೆ ಸೇರಿ ಈಕ್ವಿನಾಕ್ಸ್ ಕಂಪನಿ ಶುರು ಮಾಡಿ ಸೈಟ್ ಮಾರಾಟ ಬ್ಯುಸಿನೆಸ್
ಮುಂದುವರೆಸಿದರು.
ಪ್ರೇಮಕುಮಾರಿಗೆ ಐ.ಟಿ. ಯಿಂದ 80ಲಕ್ಷದ ಟ್ಯಾಕ್ಸ್ ನೋಟಿಸ್ ಬಂದಿತ್ತು. ದಾಖಲೆ ಪರಿಶೀಲಿಸಿದಾಗ ಚೇತನ್ ರಾಜಮಾಣಿಕ್ಯ ದಾಖಲೆ ತಿದ್ದಿ ಮೋಸ ಮಾಡಿದ್ದಕ್ಕೆ ನೋಟಿಸ್ ಬಂದಿದೆ. ಈ ಮೋಸದ ವಿರುದ್ಧ ಪ್ರೇಮಕುಮಾರಿ FIR ದಾಖಲಿಸಿ ಮಾಧ್ಯಮಕ್ಕೆ ಚೇತನ್ ವಿರುದ್ಧ ಹೇಳಿಕೆ ನೀಡಿದ್ದರು.
ಈ ಬಗ್ಗೆ ಚೇತನ್ ಹೇಳೋದೆ ಬೇರೆ. ಪ್ರೇಮಕುಮಾರಿ ಮತ್ತುನಾನು ರಾಜಮಾಣಿಕ್ಯ ಕಂಪನಿ ಪಾರ್ಟ್ ನರ್ಸ್
ಮಾತ್ರ. ವ್ಯವಹಾರವನ್ನ ಪ್ರೇಮಕುಮಾರಿ ಗಂಡ ವೆಂಕಟೇಶ್ ನೋಡಿಕೊಳ್ತಿದ್ರು. ಅವರಿಗೆ ಕಡಿಮೆ ಕೆಲಸಕ್ಕೆ ಹೆಚ್ಚು ಲಾಭ ಬೇಕಿತ್ತು. ಆದ್ದರಿಂದ ನಾನು ನನ್ನ ಹೆಂಡತಿ ಹೊರ ಬಂದು ಇಕ್ವಿನಾಕ್ಸ್ ಸಂಸ್ಥೆಯನ್ನು ಪ್ರಾರಂಭ ಮಾಡಿ ವ್ಯವಹಾರ ಮಾಡ್ತಿದ್ವಿ. ಇದ್ರಿಂದ ನನ್ನ ಬೆಳವಣಿಗೆ ಸಹಿಸದೆ ಪ್ರೇಮಕುಮಾರಿ ಮತ್ತು ವೆಂಕಟೇಶ್ ದಂಪತಿ ನನ್ನ ತೇಜೋವಧೆ ಮಾಡ್ತಿದ್ದಾರೆ ಎಂದು ಚೇತನ್ ಪ್ರತ್ಯಾರೋಪ ಮಾಡಿದ್ದಾರೆ.
ಪ್ರೇಮಕುಮಾರಿ ಆರೋಪಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ನೀಡಿದ್ದಾರೆ. ಚೇತನ್ ಪ್ರತ್ಯಾರೋಪ ಸಂಬಂಧ ಯಾವ ದಾಖಲೆ ನೀಡಿಲ್ಲ ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ಅದೇನೆ ಇರಲಿ ಯಲಹಂಕ ಉಪನಗರ ಪೊಲೀಸರು ರಾಜಮಾಣಿಕ್ಯ & ಈಕ್ವಿನಾಕ್ಸ್ ಸಂಸ್ಥೆಗಳ ಹಣಕಾಸಿನ ವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ..
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
PublicNext
15/09/2022 10:42 am