ಚಾಮರಾಜಪೇಟೆ: ಬೆಂಗಳೂರು ಪೊಲೀಸ್ರು ದಕ್ಷತೆಗೆ, ಸಂಯಮಕ್ಕೆ ಹೆಸರು ಮಾಡಿದವ್ರು ಅಂತಹ ಪೊಲೀಸರ ಮದ್ಯೆ ಇಲ್ಲೊಬ್ಬ ಪಿಎಸ್ ಲಾಠಿ ಹಿಡಿದು ಸುಖಾ ಸುಮ್ಮನೆ ದರ್ಪತೋರಿದ್ದಾರೆ..
ಎಲ್ಲಿಂದಲೋ ಬಂದು ಹೊಟ್ಟೆ ಪಾಡಿಗೆ ಕೆಲಸ ಮಾಡ್ತಿದ್ದ ಹೋಟೆಲ್ ಸಿಬ್ಬಂದಿಗೆ ಪಿಎಸ್‌ಐ ಮನೋಸೋ ಇಚ್ಚೆ ಥಳಿಸಿದ್ದಾರೆ. ಜೆಜೆಆರ್ ನಗರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಸಂಗಮ್ ಹೌಸ್ ಆಫ್ ಕಬಾಬ್ಸ್ ಹೋಟೆಲ್ ನ ಕಾರ್ಮಿಕ ಸೈಯದ್ ಮೇಲೆ ಹಲ್ಲೆ ನಡೆಸಿ ದರ್ಪ ತೋರಿದ್ದಾರೆ.
10ನೇ ತಾರೀಖು ರಾತ್ರಿ 10:45ಕ್ಕೆ ನಡೆದಿರೊ ಘಟನೆಯಿದಾಗಿದ್ದು, ಅಸಲಿಗೆ ಹೋಟೆಲ್ ಮುಚ್ಚೋಕೆ ಸಮಯವನ್ನ ಸರ್ಕಾರ ಇರೋದು ರಾತ್ರಿ 1ಗಂಟೆ ತನಕ ಕೊಟ್ಟಿದೆ. ಇಷ್ಟಿದ್ರು 11:45ಕ್ಕೆ ಹೋಟೆಲ್ ಮುಚ್ಚಿ ಸಿಬ್ಬಂದಿ ಸೈಯ್ಯದ್ ಬಿಲಾಲ್ ಡೋರ್ ಬಳಿ ನಿಂತಿದ್ದ. ಈ ವೇಳೆ ಹೋಟೆಲ್ ಬಳಿ ಬಂದ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಲಾಠಿಯಲ್ಲಿ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಸದ್ಯ ಹಲ್ಲೆಗೊಳಗಾದ ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಘಟನೆ ನೋಡಿದ ಜನ ಏನ್ ಸ್ವಾಮಿ 11ಕ್ಕೆ ಹೋಟೆಲ್ ಹೊರಗೆ ನಿಂತಿರೋದು ಕ್ರಿಮಿನಲ್ ಅಫೆನ್ಸಾ ಅಂತ ಪ್ರಶ್ನೆ ಮಾಡ್ತಿದ್ದಾರೆ. ಒಂದು ಗಂಟೆ ತನಕ ಹೋಟೆಲ್ ಓಪನ್ ಮಾಡಲು ಸಮಯ ಇದ್ರೂ ನಿಮ್ಮ ದರ್ಪ ಸರಿಯೇ? ಒಂದು ಗಂಟೆ ನಂತ್ರ ಹೋಟೆಲ್ ಓಪನ್ ಇದ್ರೆ ಕೇಸ್ ಹಾಕಿ ಅದನ್ನ ಬಿಟ್ಟು ಹೊಡೆಯೋಕೆ ನಿಮಗೆ ಅಧಿಕಾರ ಕೊಟ್ಟವರು ಯಾರು ಅಂತ ಪ್ರಶ್ನೆ ಮಾಡ್ತಿದ್ದಾರೆ. ಇನ್ನೂ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ದೌರ್ಜನ್ಯಕ್ಕೆ ಕಮೀಷನರ್ ಪ್ರತಾಪ್ ರೆಡ್ಡಿ ಏನು ಕ್ರಮ ಕೈಗೊಳ್ತಾರೆ ಕಾದು ನೋಡಬೇಕು.
PublicNext
13/09/2022 08:58 am