ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಬ್‌ನಲ್ಲಿ ಕನ್ನಡ ಹಾಡು ಹಾಕಲು ಕೇಳಿದ್ದಕ್ಕೆ ಯುವತಿ ಮತ್ತು ಆಕೆಯ ಸಹೋದರನಿಗೆ ಹಲ್ಲೆ

ಬೆಂಗಳೂರು: ಕರುನಾಡಿನಲ್ಲಿಯೇ ಕನ್ನಡಕ್ಕೆ ಅವಮಾನ ಆಗುತ್ತಿದೆ. ಅದು ಕೂಡ ರಾಜಧಾನಿಯ ಕೋಟಿ ಬ್ಯುಸಿನೆಸ್ ಮಾಡೋ ಪಬ್ ಗಳಲ್ಲಿ. ಕನ್ನಡ ಹಾಡು ಹಾಕದೇ ಕನ್ನಡ ಭಾಷೆಯನ್ನ ಕಡೆಗಣನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಪಬ್‌ನಲ್ಲಿ ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಯುವತಿ ಹಾಗೂ ಆಕೆಯ ಸಹೋದರನ ಮೇಲೆ ಹಲ್ಲೆಗೆ ಮುಂದಾದ್ರಾ? ಈ ರೀತಿಯ ಆರೋಪವನ್ನು ಯುವತಿಯೊಬ್ಬರು ಮಾಡ್ತಿದ್ದಾರೆ.

ಕೋರಮಂಗಲ 80 ಫೀಟ್ ರಸ್ತೆಯಲ್ಲಿರುವ ಬದ್ಮಾಷ್‌ ಎಂಬ ಪಬ್‌ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ.

ಆದ್ರೆ ಪಬ್‌ನ ಕಟ್ಟಡದ ಮೇಲೆ ಮಾತ್ರ ಕನ್ನಡದ ಬಾವುಟ ಹಾಕಿಕೊಂಡು ಡಬಲ್ ಗೇಮ್ ಆಡ್ತಿದ್ದಾರಾ? ಎಂಬ ಅನುಮಾನ ಶುರುವಾಗಿದೆ. ಯುವತಿ ಸುಮಿತಾ ಹಾಗೂ ಸಹೋದರ ನಂದಕಿಶೋರ್ ಮೇಲೆ ಡಿಜೆ ಹಲ್ಲೆಗೆ ಮುಂದಾದ ಆರೋಪ ಕೇಳಿಬಂದಿದ್ದು. ಬದ್ಮಾಷ್ ಪಬ್ ಡಿಜೆ ಸಿದ್ಧಾರ್ಥ್ @ ಆಪೋಸಿಟ್‌ನಿಂದ ಹಲ್ಲೆ ಯತ್ನ ಅಂತ ಹೇಳಲಾಗ್ತಿದೆ.

ಮೊನ್ನೆ ಸುಮಿತಾ ಹುಟ್ಟು ಹಬ್ಬವಿತ್ತು. ಹಾಗಾಗಿ ರಾತ್ರಿ 9 ಗಂಟೆಗೆ ಸುಮಿತಾ ತನ್ನ ಸಹೋದರರು ಹಾಗೂ ಸ್ನೇಹಿತರು ಸೇರಿ ೧೫ ಜನರೊಂದಿಗೆ ಬದ್ಮಾಷ್ ಪಬ್‌ಗೆ ಪಾರ್ಟಿ ಮಾಡೋದಿಕ್ಕೆ ತೆರಳಿದ್ದರು. ಈ ವೇಳೆ ಕನ್ನಡ ಹಾಡು ಹಾಕಿ ಎಂದು ಅಲ್ಲಿದ್ದ ಡಿಜೆಗಳಿಗೆ ಮನವಿ ಮಾಡಿದ್ದಾರೆ. 9.30 ರಿಂದ ರಾತ್ರಿ‌ 12.30 ಗಂಟೆವರೆಗೂ ಡಿಜೆ ಬಳಿ ಮನವಿ ಮಾಡಿದ್ರಂತೆ. ಸ್ವತಃ ಯುವತಿ ಸುಮಿತಾ ತೆರಳಿ ಒಂದೇ ಒಂದು ಕನ್ನಡ ಹಾಡು ಹಾಕಿ‌ ಎಂದು ನಾಲ್ಕೈದು ಬಾರಿ ಕೇಳಿದ್ರಂತೆ. ಅಲ್ಲದೇ ಸುಮಿತಾರ ಮತ್ತೊಬ್ಬ ಸಹೋದರ ಡಾ.ದೀಪಕ್ ಕೂಡ ಕನ್ನಡ ಹಾಡಿಗೆ ಮನವಿ ಮಾಡಿದ್ದಾರೆ.

ಕನ್ನಡ ಸಾಂಗ್ ಹಾಕಲಿಕ್ಕೆ ಆಗಲ್ಲ. ಕನ್ನಡ ಸಾಂಗ್ ಕೇಳೋದಾದ್ರೆ ಹೊರಗ್ ಹೋಗಿ ಅಂತ ಡಿಜೆಗಳು ಅವಾಜ್ ಹಾಕಿದ್ದಾರೆಂದು ಸುಮಿತಾ ಹೇಳ್ತಿದ್ದಾರೆ. ಈ ವೇಳೆ ಪದೇ ಪದೇ ಕೇಳ್ತಿದ್ದಾಗ ಸುಮಿತಾ ಸ್ನೇಹಿತರು ಮತ್ತು ಸಹೋದರರಿದ್ದ ಟೇಬಲ್ ಬಳಿ ಬಂದ ಡಿಜೆ ಸಹೋದರ ನಂದ ಕಿಶೋರ್ ಕಾಲರ್ ಹಿಡಿದು ಆವಾಜ್ ಹಾಕಿದ್ರು ಎನ್ನಲಾಗುತ್ತಿದೆ. ಈ ವೇಳೆ ಬದ್ಮಾಷ್ ಪಬ್‌ನಲ್ಲಿ ವಾಗ್ವಾದ ನಡೆದರೆ ಕೆಲವರು ಕನ್ನಡವನ್ನು ಕೇವಲವಾಗಿ ಆಡಿಕೊಂಡು ಕನ್ನಡ ಸಾಂಗ್ ಹಾಕದೇ ತೆಲುಗು ತಮಿಳು ಹಿಂದಿ ಹಾಡುಗಳನ್ನ ಪ್ಲೇ ಮಾಡಿದ್ರು ಎನ್ನಲಾಗ್ತಿದೆ.

ಇನ್ನು ಇಷ್ಟೆಲ್ಲ ಆದ್ರೂ ಕೋರಮಂಗಲ ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎನ್ನುವುದು ದುರಂತ. ಎರಡು ಗಂಟೆವರೆಗೂ ಪಬ್ ಬಾಗಿಲು ಓಪನ್ ಇದ್ರೂ ಹೇಳೋರು ಇಲ್ಲ ಕೇಳೋರು ಎನ್ನುವಂತಾಗಿದೆ.

ಆದ್ರೆ ಯುವತಿ ಮಾತ್ರ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಇನ್ನು ಬೆಳಿಗ್ಗೆ ಕೆಲ ಕನ್ನಡ‌ಪರ ಹೋರಾಟಗಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Shivu K
Kshetra Samachara

Kshetra Samachara

06/02/2022 11:46 am

Cinque Terre

1.71 K

Cinque Terre

0