ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಬಕಾರಿ ಇಲಾಖೆ ಅಧಿಕಾರಿಗಳ ಕೈಗೆ ಲಾಕ್ ಆದ ಅಂತರ್ ರಾಜ್ಯ ಗಾಂಜಾ ಪೆಡ್ಲರ್

ಬೆಂಗಳೂರು: ಗಾಂಜಾ ಮತ್ತು ಡ್ರಗ್ಸ್ ಮೇಲೆ ನಿಯಂತ್ರಣಕ್ಕೆ ಪೊಲೀಸರು ಸಾಕಷ್ಟು ನಿಗಾ ವಹಿಸಿದ್ರೂ ಈ ಪೆಡ್ಲರ್ ಗಳು ಮಾತ್ರ ಕಳ್ಳ ದಾರಿಯಲ್ಲಿ ಗಾಂಜಾವನ್ನು ನಗರಕ್ಕೆ ಸಾಗಿಸ್ತಿದ್ದಾರೆ. ಅದು ಕೂಡ ಕೊರಿಯರ್ ರೀತಿ ಬಾಕ್ಸ್ ಮಾಡಿ ಅದರಲ್ಲಿ ವ್ಯವಸ್ಥತಿವಾಗಿ ಗಾಂಜಾ ಇಟ್ಟು ನಗರಕ್ಕೆ ಸಪ್ಲೈ ಮಾಡ್ತಿದ್ದಾರೆ. ಆ ಆರೋಪಿಯನ್ನ ಈಗ ರೆಡ್ ಹ್ಯಾಂಡ್ ಆಗಿ ನಗರ ಅಬಕಾರಿ ಇಲಾಖೆ ಪೊಲೀಸ್ರು ಲಾಕ್ ಮಾಡಿದ್ದಾರೆ.

ಜೆಪಿನಗರದ ಬಳಿ ಕಿಟ್ ಬ್ಯಾಗ್ ನಲ್ಲಿ ಎರಡೆರಡು ಕೆ.ಜಿ. ಬಾಕ್ಸ್ ಮಾಡಿ ಮಾರಾಟ‌ ಮಾಡ್ತಿದ್ದ 12 kg ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.

ತ್ರಿಪುರಾ ಮೂಲದ ಎಂ ಅಲಿ ಎಂಬಾತನನ್ನ ಬಂಧಿಸಿರೋ ಅಬಕಾರಿ ಅಧಿಕಾರಿಗಳು, ಆತನ ಪೂರ್ವಪರ ಮಾಹಿತಿ ಕಲೆ ಹಾಕ್ತಿದ್ದಾರೆ.

ಇನ್ನು ರಾಜ್ಯಕ್ಕೆ ರೈಲು ,ಟ್ರಕ್‌ಗಳ ಮೂಲಕ ಕೊರಿಯರ್‌ನಲ್ಲಿ ಗಾಂಜಾ ತರಿಸಿಕೊಳ್ತಿದ್ದ ಎಂದು ತಿಳಿದು ಬಂದಿದೆ.

ಅಬಕಾರಿ ಎಸ್ಪಿ ವೀರಣ್ಣ ಬಾಗೇವಡಿ ಅಂಡ್ ಟೀಂ ಕಳೆದ ಆರು ತಿಂಗಳಲ್ಲಿ 9 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿ

ಈಗಾಗಲೇ 25 ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಶ್ರೀನಿವಾಸ್ ಚಂದ್ರ ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

05/02/2022 10:22 pm

Cinque Terre

1.75 K

Cinque Terre

0

ಸಂಬಂಧಿತ ಸುದ್ದಿ