ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊನೆಗೂ ಪೊಲೀಸರ ಕೈಸೇರಿತು ಅಪರಾಧಿಗಳ‌ ಜನ್ಮಜಾಲಾಡುವ ಆ್ಯಪ್

ಬೆಂಗಳೂರು: ನಗರಗಳಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನ ತಡೆಯೋಕೆ ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಬೆಂಗಳೂರಿನಲ್ಲಿ ಜನರು ರಾತ್ರಿ ಹಗಲು ಎನ್ನದೇ ಕೆಲಸ ಮಾಡ್ತಾರೆ. ಅದರಲ್ಲೂ ಐಟಿ-ಬಿಟಿ ಹಾಗೂ ಎಮ್‌ಎನ್‌ಸಿ ಕಂಪನಿಗಳಲ್ಲಿ ಕೆಲಸ ಮಾಡೋರು ತಡರಾತ್ರಿಯಾದ್ರೂ ಓಡಾಡ್ತಾನೆ ಇರ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಪಾತಕಿಗಳಯ, ತಡರಾತ್ರಿ ಓಂಟಿಯಾಗಿ ಓಡಾಡೋರನ್ನು ಅಡ್ಡಹಾಕಿ ಸುಲಿಗೆ ಮಾಡ್ತಾರೆ. ಅಷ್ಟೇ ಅಲ್ಲದೆ ನಗರದಲ್ಲಿ ಇತ್ತೀಚೆಗೆ ಕೊಲೆ, ದರೋಡೆಯಂತಹ ಅಪರಾಧಗಳು ಹೆಚ್ಚುತ್ತಲೇ ಇವೆ. ಹೀಗಾಗಿಯೇ ನಗರಗಳಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳ ತಡೆಗೆಂದು ಕೇಂದ್ರ ಗೃಹ ಇಲಾಖೆ ಹೊಸದೊಂದು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಎಮ್‌ಸಿಸಿಟಿಎನ್ಎಸ್ ಅನ್ನೋ ಆ್ಯಪ್​ ಅನ್ನು ಪ್ರಾಯೋಗಿಕವಾಗಿ ಬೆಂಗಳೂರು ಪೊಲೀಸರಿಗೆ ಪರಿಚಯಿಸಿದ್ದು, ಪೊಲೀಸರು ಈಗಾಗಲೇ ಫೀಲ್ಡಿಗಿಳಿದು ಈ ಆ್ಯಪ್​ನ ಬಳಕೆ ಮಾಡ್ತಿದ್ದಾರೆ.

ಎಮ್‌ಸಿಸಿಟಿಎನ್ಎಸ್​ ಅನ್ನೋ ಈ ಹೊಸ ಆ್ಯಪ್‌ ಅನ್ನು ಮೊಬೈಲ್​ನಲ್ಲಿ ಇನ್​ಸ್ಟಾಲ್​ ಮಾಡಲಾಗಿದ್ದು, ಇದರಲ್ಲಿ ಕ್ರಿಮಿನಲ್ಸ್​ಗಳ ಹಿಸ್ಟರಿ ಸೇರಿದಂತೆ ಇತರೆ ಎಲ್ಲ ಮಾಹಿತಿ ಲಭ್ಯವಿರಲಿದೆ. ಒಮ್ಮೆ ಒಬ್ಬರ ಫಿಂಗರ್​ ಪ್ರಿಂಟ್​ ಅನ್ನು ಸ್ಕ್ಯಾನರ್​ನಲ್ಲಿ ತೆಗೆದುಕೊಂಡರೆ ಸಾಕು, ಅದು ಆ್ಯಪ್​ನಲ್ಲಿರುವ ಅಪರಾಧಿಗಳ ಫಿಂಗರ್​ ಪ್ರಿಂಟ್​ ಜೊತೆ ಮ್ಯಾಚ್​ ಆದ್ರೆ, ಆ ವ್ಯಕ್ತಿಯ ಜನ್ಮಜಾತಕವೇ ಕ್ಷಣ ಮಾತ್ರದಲ್ಲಿ ಪೊಲೀಸ್ರಿಗೆ ಸಿಗುತ್ತದೆ. ಇದರಿಂದಾಗಿ ತಲೆಮರೆಸಿಕೊಂಡು ಸುತ್ತಾಡುತ್ತಿರುವ ಆರೋಪಿಗಳು ಸುಲಭವಾಗಿ ಪೊಲೀಸ್ರ ಬಲೆಗೆ ಬೀಳುತ್ತಾರೆ. ಈ ಕಾರಣದಿಂದಲೇ ನಗರದ ಪ್ರತಿ ಸ್ಟೇಷನ್‌ಗೆ ತಲಾ ಐದರಂತೆ ಸ್ಕ್ಯಾನರ್​ಗಳನ್ನು ಹಾಗೂ ಮೊಬೈಲ್​ಗಳಿಗೆ ಆ್ಯಪ್​ಗಳನ್ನ ಅವಳವಡಿಸಿಕೊಡಲಾಗಿದೆ. ರಾತ್ರಿ 11 ಗಂಟೆ ನಂತರ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುವ ಜನರ ಬೆರಳಚ್ಚನ್ನು ಸ್ಕ್ಯಾನ್​ ಮಾಡಿಸುತ್ತಿದ್ದಾರೆ. ಈ ಕೆಲಸ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದ್ದ, ಕೆಲವು ಕಡೆ ಈ ಆ್ಯಪ್​ ಸಹಾಯದಿಂದ ಆರೋಪಗಳ ಬಂಧನ ಸಹ ಆಗಿದೆಯಂತೆ.

ಸ್ಕ್ಯಾನ್​ ಮಾಡುವ ವೇಳೆ ಯಾರಾದ್ರೂ ಅಪರಾಧ ಹಿನ್ನಲೆ ಇರುವ ವ್ಯಕ್ತಿ ಸಿಕ್ಕಿ ಬಿದ್ರೆ, ಕೂಡಲೇ ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲು ಇಲಾಖೆ ತೀಮಾರ್ನಿಸಿದೆ. ಹೀಗಾಗಿಯೇ ಯಾವುದೇ ಕ್ರಿಮಿನಲ್ ಸುಳ್ಳು ಹೇಳಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳೋಕೆ ಆಗೋದಿಲ್ಲ ಅನ್ನೋದು ಪೊಲೀಸ್ರ ನಂಬಿಕೆ.

ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

13/09/2022 10:39 pm

Cinque Terre

40.86 K

Cinque Terre

1