ಬೆಂಗಳೂರು: ಪೋಟೊದಲ್ಲಿ ಕಾಣ್ತಿರೋ ಇವರ ಹೆಸರು ಅನಿತಾ (28) ಅಂತಾ. ಕರ್ನಾಟಕ- ಆಂಧ್ರದ ಗಡಿ ಪೆನುಕೊಂಡ ತಾಲೂಕಿನ ಮೇಕಲಪಲ್ಲಿ ಗ್ರಾಮದವ್ರು. ಬೆಂಗಳೂರು ಉತ್ತರ ತಾಲೂಕಿನ ಬೈನಹಳ್ಳಿ ಗ್ರಾಮದ ತೋಟದ ಕೆಲಸಕ್ಕಾಗಿ ಗಂಡ ಆನಂದ್ ಜೊತೆ 6 ತಿಂಗಳ ಹಿಂದೆ ಬಂದಿದ್ದರು. ನಿನ್ನೆ ರಾತ್ರಿ 6 ತಿಂಗಳ ತುಂಬು ಗರ್ಭಿಣಿ ಅನಿತಾ ಅನುಮಾನಾಸ್ಪದ ರೀತಿ ಸಾವನ್ನಪ್ಪಿದ್ದಾರೆ!
ಅನಿತಾ 9 ವರ್ಷಗಳ ಹಿಂದೆ ಆನಂದ್ ಕುಮಾರನನ್ನು ಮದುವೆಯಾಗಿದ್ದರು. ಗಂಡ ಬೈನಹಳ್ಳಿ ಶ್ರೀಧರಮೂರ್ತಿ ಅವರ ತೋಟ ನೋಡಿಕೊಳ್ತಿದ್ದ. ಹೆಂಡತಿ ಸಹ ಗಂಡ ಇದ್ದ ತೋಟದಲ್ಲೇ ಬಂದು ವಾಸವಿದ್ದಳು.
ಕಳೆದ ರಾತ್ರಿ ಏನಾಯ್ತೋ ಏನೋ? ಗಂಡ ಕುಡಿದು ಬಂದು ಹೆಂಡತಿ ಜೊತೆ ಜಗಳ ಮಾಡಿದ್ದಾನಂತೆ. 8 ಗಂಟೆ ಸುಮಾರಿಗೆ ಅನಿತಾ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ಗಂಡನೇ ಪತ್ನಿ ಮನೆಯವರಿಗೆ ಪೋನ್ ಮಾಡಿ ತಿಳಿಸಿದ್ದ. ಪೋಷಕರು ಆಂಧ್ರದಿಂದ ಬರುವಷ್ಟರಲ್ಲೇ ಮೃತದೇಹವನ್ನು ನೇಣಿನಿಂದ ಇಳಿಸಲಾಗಿತ್ತಂತೆ!
ಗಂಡನೇ ಕೊಲೆ ಮಾಡಿ, ಬಳಿಕ ನಾಟಕವಾಡಿದ್ದಾನೆ ಎಂದು ಅನಿತಾ ಕುಟುಂಬ ಆರೋಪಿಸಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತ್ಯಾಂಶ ಇನ್ನಷ್ಟೇ ಗೊತ್ತಾಗಬೇಕಿದೆ.
PublicNext
25/09/2022 09:46 am