ಬನ್ನೇರುಘಟ್ಟ: ರಾಜ ರಾಣಿ ರೋರರ್ ರಾಕೆಟ್ ಚಿತ್ರ ತಂಡ ಇಂದು ಬನ್ನೇರುಘಟ್ಟ ಸಮೀಪದ ಹೋಪ್ ನರ್ಸರಿ ಪ್ರೈಮರಿ ಮತ್ತು ಪ್ರೌಢಶಾಲೆಗೆ ಭೇಟಿ ನೀಡಿ ಚಿತ್ರದ ಬಗ್ಗೆ ಪ್ರಚಾರ ಮಾಡಿದರು. ಚಿತ್ರದ ನಾಯಕ ಭೂಷಣ್ ಹಾಗೂ ನೃತ್ಯ ನಿರ್ದೇಶಕ ಜಗ್ಗಿನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ಇದೇ ತಿಂಗಳು ಸೆಪ್ಟೆಂಬರ್ 23 ನೇ ತಾರೀಖಿನಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ ಎಂದು ತಿಳಿಸಿದರು.
ಚಿತ್ರದ ನಾಯಕ ಭೂಷಣ್ SSLC ಮಕ್ಕಳೊಂದಿಗೆ ಚಿತ್ರದ ಬಗ್ಗೆ ಹಾಗೂ ಶಿಕ್ಷಣದ ಬಗ್ಗೆ ಮಕ್ಕಳಿಗೆ ಜಾಗೃತಿಯನ್ನು ಮೂಡಿಸಿದ್ರು. ಇನ್ನು ಭೂಷಣ್ ಸುಮಾರು ಹದಿನೈದು ವರ್ಷದಿಂದ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದು, ಚುಟು ಚುಟು ಅಂತೈತಿ ಎಂಬ ಜನಪ್ರಿಯ ಹಾಡಿಗೆ ನೃತ್ಯ ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ್ದರು.
ಅಲ್ಲದೆ ,ನಟಸಾರ್ವಭೌಮ. ರ್ಯಾಂಬೊ 2, ರಾಬರ್ಟ್ , ಬೆಲ್ ಬಾಟಮ್ ನಂತಹ ಸೂಪರ್ ಹಿಟ್ ಚಿತ್ರಗಳಿಗೂ ನೃತ್ಯ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದಾರೆ .ಇನ್ನು ಮೊಟ್ಟಮೊದಲ ಬಾರಿಗೆ ನಾಯಕನಾಗಿ ರಾಜ ರಾಣಿ ರೋರರ್ ರಾಕೆಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ಭೂಷಣ್ ಮೊಟ್ಟಮೊದಲ ಬಾರಿಗೆ ನೃತ್ಯ ನಿರ್ದೇಶಕ ನಾಯಕನಾಗಿರುವುದು ಖುಷಿ ತಂದಿದೆ. ಸೆಪ್ಟೆಂಬರ್ 23ರಂದು ಚಿತ್ರತೆರೆಗೆ ಬರ್ತಿದೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಭೂಷಣ್ ತಿಳಿಸಿದ್ರು. ಇನ್ನು ಚಿತ್ರಕ್ಕೆ ಆಕ್ಷನ್ ಕಟ್ ಕೆಂಪೇಗೌಡ ಮಾಗಡಿ, ನೃತ್ಯ ನಿರ್ದೇಶಕರು ಜಗ್ಗು ನಾಯಕಿಯಾಗಿ ಮಾನ್ಯ ಹಿರಿಯ ನೃತ್ಯ ನಿರ್ದೇಶಕ ಮುಗೂರು ಸುಂದರಂ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಹೋಪ್ ನರ್ಸರಿ ಪ್ರೈಮರಿ ಮತ್ತು ಪ್ರೌಢಶಾಲೆಯ ಅಡ್ಮಿನಿಸ್ಟ್ರೇಟಿವ್ ದೀಪಕ್ ಮಾತನಾಡಿ, ಈ ಚಿತ್ರ ತಂಡ ನಮ್ಮ ಶಾಲೆಗೆ ಬಂದಿರೋದು ಖುಷಿ ವಿಚಾರ ನಟನೆಗೆ ಒಳ್ಳೆಯ ಹೆಸರು ತಂದು ಕೊಡ್ಲಿ ಚಿತ್ರಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಹೋಪ್ ಶಾಲೆಯ ಮಕ್ಕಳು ಶಿಕ್ಷಕರು ಹಾಗೂ ಚಿತ್ರತಂಡ ಭಾಗಿಯಾಗಿದ್ದರು..
-ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
12/09/2022 08:44 pm