ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡಾ ಕೆ.ಸುಧಾಕರ್ ತವರು ಕ್ಷೇತ್ರದಲ್ಲೇ ಶ್ರದ್ಧಾಂಜಲಿ ವಾಹನಕ್ಕೆ ಶ್ರದ್ಧಾಂಜಲಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾಂಜಲಿ ವಾಹನಕ್ಕೆ ಅಧಿಕಾರಿಗಳು ತಿಲಾಂಜಲಿ ಹಾಡಿದಾರೆ. ಉಳ್ಳವರು ಸತ್ತಾಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆರವಣಿಗೆ ಮಾಡ್ತಾರೆ. ಬಡವರು ಸತ್ತಾಗ ಶವ ಸಾಗಿಸಲು ಹಣವಿಲ್ಲದೆ ಒದ್ದಾಡುವ ಪರಿಸ್ಥಿತಿಯೂ ಇದೆ. ಇದನ್ನ ತಪ್ಪಿಸಲು ಸರ್ಕಾರ ಪ್ರತಿ ತಾಲ್ಲೂಕಿಗೂ ಉಚಿತ ಶ್ರದ್ಧಾಂಜಲಿ ವಾಹನ ಕಲ್ಪಿಸಿತ್ತು. ಆದರೆ ಸ್ವತಃ ಆರೋಗ್ಯ ಸಚಿವರ ತವರು ಕ್ಷೇತ್ರದ ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳು ಶ್ರದ್ಧಾಂಜಲಿ ವಾಹನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಬೇಜವಾಬ್ದಾರಿ ಮೆರೆದಿದ್ದಾರೆ.

ಹಲವಾರು ವರ್ಷಗಳಿಂದ ಶ್ರದ್ಧಾಂಜಲಿ ವಾಹನ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿದೆ. ಶ್ರದ್ಧಾಂಜಲಿ ವಾಹನ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು, ಸ್ವತಃ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಪಘಾತ ಅನಾರೋಗ್ಯದಿಂದ ಸತ್ತವರ ಮೃತದೇಹ ಅವರ ಕುಟುಂಭಸ್ಥರಿಗೆ ತಲುಪಿಸಲು ಸರ್ಕಾರ 2019 ರಲ್ಲೇ ಪ್ರತಿ ತಾಲ್ಲೂಕಿಗೂ ಒಂದೊಂದು ಶ್ರದ್ಧಾಂಜಲಿ ವಾಹನ ಕಲ್ಪಿಸುವಂತೆ ಆದೇಶ ಮಾಡಿದೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಒಂದು ಆಂಬ್ಯುಲೆನ್ಸ್ ಅನ್ನು ಶ್ರದ್ಧಾಂಜಲಿ ವಾಹನ‌ವಾಗಿ ಮಾರ್ಪಡಿಸಿ ನಿಸರ್ಗ ಸ್ವಯಂ ಸೇವಾ ಸಂಸ್ಥೆಗೆ ನಿರ್ವಹಣೆಗೆ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಈ ವಾಹನಕ್ಕೆ ಚಾಲಕನಿಗೆ ಮತ್ತು ಒಬ್ಬ ಹೆಲ್ಪರ್‌ಗೆ ಸಂಬಳ ಕೊಡಲು ನಗರಸಭೆಗೆ ಆದೇಶ ನೀಡಿದ್ದಾರೆ.

ನಗರಸಭೆಯ ಅಧಿಕಾರಿಗಳು ಸಂಬಳ ಕೊಡೋದಕ್ಕೆ ನಿರಾಕರಿಸಿದ್ದಕ್ಕೆ ನಿಂತಲ್ಲೇ ವಾಹನ ಕೊಳೆಯುತ್ತಿದೆ. ಇನ್ನೂ ಕಾರ್ನಾಟಕ ಆಂಧ್ರ ಗಡಿ ಪ್ರದೇಶದ ಹಳ್ಳಿಗಳಿಗೆ ಮೃತದೇಹ ಕೊಂಡೊಯ್ಯಲು ಸಾರ್ವಜನಿಕರು ಖಾಸಗಿ ಆಂಬ್ಯುಲೆನ್ಸ್ ಗಳಿಗೆ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಹೈರಾಣಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಆಂಬ್ಯುಲೆನ್ಸ್ ಚಾಲಕರು ಬಂಡವಾಳ ಮಾಡಿಕೊಂಡು ಮನಬಂದಂತೆ ಹಣ ವಸೂಲಿಗೆ ಇಳಿದಿದ್ದಾರೆ. ಕೇಳಿದಷ್ಟು ಹಣ ಚಾಲಕರ ಜೇಬಿಗೆ ಹೋಗಲಿಲ್ಲ ಅಂದರೆ ಶವ ಗ್ರಾಮಕ್ಕೆ ಸೇರಲ್ಲ. ಆದಷ್ಟು ಬೇಗ ನಗರಸಭೆ ಅಧಿಕಾರಿಗಳು ಗಮನ ಹರಿಸಿ ಉಚಿತ ಶ್ರದ್ಧಾಂಜಲಿ ವಾಹನ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : Somashekar
Kshetra Samachara

Kshetra Samachara

13/09/2022 03:40 pm

Cinque Terre

37.6 K

Cinque Terre

0