ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ.16ರಂದು ಚುನಾವಣೆ ಚಿಕ್ಕಬಳ್ಳಾಪುರ: ಕೃಷಿಕ ಸಮಾಜ ಕಾರ್ಯಕಾರಿ ಸಮಿತಿ ಚುನಾವಣೆಯಿಂದ ಹಿಂದೆ ಸರಿದ ತಿಪ್ಪಾರೆಡ್ಡಿ

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕು ಕೃಷಿಕ ಸಮಾಜ ಕಾರ್ಯಕಾರಿ ಸಮಿತಿಯ ಐದು ವರ್ಷಗಳ ಅವಧಿಗೆ ಡಿಸೆಂಬರ್ 16ರಂದು ಚುನಾವಣೆ ನಡೆಯಲಿದ್ದು, ಕಣಕ್ಕಿಳಿದಿದ್ದ ಆರ್. ತಿಪ್ಪಾರೆಡ್ಡಿ ಬಿನ್ ರಾಮಕೃಷ್ಣಪ್ಪ ಆಲಂಗಿರಿ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷಿಕ ಸಮಾಜ ಕಾರ್ಯಕಾರಿ ಸಮಿತಿಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂಪಡೆಯುವ ವೇಳೆ ನಾನು ಬೇರೆ ಕಡೆ ಇದ್ದ ಕಾರಣ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾನು ಚುನಾವಣೆಯಿಂದ ಹಿಂದೆ ಸರಿದು ನನ್ನ ಬೆಂಬಲ ಸಚಿವ ಡಾ.ಎಂ.ಸಿ. ಸುಧಾಕರ್ ಅವರ ಬೆಂಬಲಿತ ಅಭ್ಯರ್ಥಿಗಳಿಗೆ ನೀಡುತ್ತಿದ್ದೇನೆ ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

15/12/2024 11:09 am

Cinque Terre

20

Cinque Terre

0