ಆನೇಕಲ್: ತಮ್ಮ ಜಮೀನುಗಳನ್ನು ಕಬಳಿಕೆ ಮಾಡಿಕೊಂಡಿವುದಾಗಿ ಆರೋಪಿಸಿ ರೈತರು ಕೆಐಎಡಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಯು2 ಎಂಬ ಖಾಸಗಿ ಸಂಸ್ಥೆಯ ಮುಖಾಂತರ ಕೆಐಎಡಿ ಇಲಾಖೆ ಸಹಯೋಗದಲ್ಲಿ ರೈತರ ಜಮೀನುಗಳನ್ನು 1996ರಲ್ಲಿ ರೈತರ ಜಮೀನುಗಳನ್ನು ಭೂ ಕಬಳಿಕೆಯನ್ನು ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ನೊಂದ ರೈತರು ಕೆಐಎಡಿ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿ ಪರಿಣಾಮ ರೈತರ ಜಮೀನುಗಳನ್ನು ಕೈಬಿಟ್ಟಿದ್ದರು. ಮತ್ತೆ ಕೋರ್ಟ್ ಮೆಟ್ಟಿಲೇರಿದ್ದು ವಾದ-ವಿವಾದ ನಂತರ ರೈತರ ಜಮೀನುಗಳನ್ನು ಕಬಳಿಕೆ ಮಾಡಲು ಹುನ್ನಾರ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ನಮ್ಮ ಜಮೀನುಗಳನ್ನು ಬಿಡುವಂತೆ ಹಾಗೂ ನಮಗೆ ನ್ಯಾಯ ಕೊಡಿಸಿ ಎಂದು ರೈತರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
Kshetra Samachara
30/04/2022 02:26 pm