ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೃತ್ಯುಕೂಪ ಆಗ್ತಿದೆ ದೇವನಹಳ್ಳಿ ಬೈಪಾಸಿನ ದೊಡ್ಡಬಳ್ಳಾಪುರ ಜಂಕ್ಷನ್

ಬೆಂಗಳೂರು : ಮೂರುದಿನಗಳ ಹಿಂದೆ IES ಆಫೀಸರ್ ನ ಬಲಿಪಡೆದಿದ್ದ ದೇವನಹಳ್ಳಿ ಬೈಪಾಸ್ ರಸ್ತೆಯ ದೊಡ್ಡಬಳ್ಳಾಪುರ ಜಂಕ್ಷನ್, ಇಂದು ಮತ್ತೊಬ್ಬ ಮಹಿಳೆಯನ್ನು ಬಲಿ ತೆಗೆದುಕೊಂಡಿದೆ.

ದೊಡ್ಡಬಳ್ಳಾಪುರ ರಸ್ತೆ ನೀರಗಂಟಿಪಾಳ್ಯದ ಮಂಜುಳಮ್ಮ(42)ನ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇಂದು ಬೆಳಗ್ಗೆ 11-30ಕ್ಕೆ ಗಂಡ ಮಂಜುನಾಥ್ ನಾಯಕ್ ಜೊತೆ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ದೊಡ್ಡಬಳ್ಳಾಪುರ ಜಂಕ್ಷನ್ ಬಳಿ ಚಿಕ್ಕಬಳ್ಳಾಪುರ ಕಡೆಯಿಂದ ಬಂದ ಸಿಮೆಂಟ್ ತುಂಬಿದ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಲಾರಿ ಚಕ್ರಕ್ಕೆ ಸಿಲುಕಿ , ತಲೆನಜ್ಜುಗುಜ್ಜಾಗಿ ಸಾವನ್ನಪ್ಪಿದ್ದರೆ, ಗಂಡನಿಗೆ ತರಚಿದ ಗಾಯಗಳಾಗಿವೆ. ಘಟನೆ ಸಂಬಂಧ ದೇವನಹಳ್ಳಿ ಸಂಚಾರಿ ಪೊಲೀಸರು ಲಾರಿ ಚಾಲಕ ಕಿರಣ್ ಬಾಬುನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಈ ಎಲ್ಲಾ ವಿಷಯ ಕುರಿತು ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ MockLive ಇಲ್ಲಿದೆ

Edited By : Somashekar
PublicNext

PublicNext

24/08/2022 07:23 pm

Cinque Terre

26.39 K

Cinque Terre

0

ಸಂಬಂಧಿತ ಸುದ್ದಿ