ಬೆಂಗಳೂರು: ಜವರಾಯ ಆದ್ಯಾರ ಪಾಲಿಗೆ ಹೇಗೆ ಎಂಟ್ರಿ ಕೊಡ್ತಾನೆ ಅಂತಾನೆ ಗೊತ್ತಾಗಲ್ಲ. ತನ್ನ ಪಾಡಿಗೆ ತಾನು ಬೈಕ್ ನಲ್ಲಿ ಹೋಗ್ತಿದ್ದ ವ್ಯಕ್ತಿಗೆ ಮರದ ದಿಮ್ಮಿಗಳೆ ಜವರಾಯನ ರೂಪದಲ್ಲಿ ದರ್ಶನ ಕೊಟ್ಟಿವೆ.
ಹೌದು ಫ್ಲೈ ಓವರ್ ಮೇಲೆ ಮರದ ದಿಮ್ಮಿ ತುಂಬಿದ ಲಾರಿ ಬಿದ್ದ ಪರಿಣಾಮ ಕೆಳ ರಸ್ತೆಯಲ್ಲಿ ಹೋಗ್ತಿದ್ದ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಾಗರಬಾವಿ ರಿಂಗ್ ರಸ್ತೆಯ ಫ್ಲೈಓವರ್ ಬಳಿ ನಡೆದಿದೆ.
ಫ್ಲೈಓವರ್ ಮೇಲಿಂದ ಲಾರಿಯಲ್ಲಿದ್ದ ಮರದ ದಿಮ್ಮಿ ಬೈಕ್ ಮೇಲೆ ಬಿದ್ದಿದೆ. ಈ ವೇಳೆ ಬೈಕ್ ಮೇಲೆ ಸಂಚರಿಸುತ್ತಿದ್ದ ಹಿಂಬದಿ ಸಾವರ ಮುಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದು ಈತನ ಜೊತೆಗಿದ್ದ ಡೇವಿಡ್ ಹಾಗೂ ಮತ್ತೊಂದು ಬೈಕ್ ನಲ್ಲಿ ತೆರಳುತ್ತಿದ್ದ ಶಿವು ಎಂಬಾತನಿಗೆ ಗಂಭೀರ ಗಾಯಗಳಾಗಿವೆ.
ಸುಂಕದಕಟ್ಟೆಯಿಂದ ನಾಗರಬಾವಿ ಕಡೆಗೆ ಬರ್ತಿದ್ದ ಆಂಧ್ರದ ಲಾರಿ, ಡ್ರೈವರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿ ಸ್ಕಿಡ್ ಆಗುತ್ತಿದ್ದಂತೆ ಫ್ಲೈಓವರ್ ನಿಂದ ಬಿದ್ದ ಮರದ ದಿಮ್ಮಿಗಳು ಫ್ಲೈಓವರ್ ಕೆಳ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಮೇಲೆ ಬಿದ್ದಿವೆ.
ಇನ್ನು ಜಸ್ಟ್ 7 ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ತಮಿಳುನಾಡು ಮೂಲದ ಮುಖೇಶ್ ಪತ್ನಿ 5 ಗರ್ಭಿಣಿ.ಸದ್ಯ ನಾಗರಬಾವಿಯ ಜಿಎಮ್ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
22/07/2022 11:09 am