ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೊಸಕೋಟೆಯ ಸಣ್ಣದೇನಹಳ್ಳಿ ಗೇಟ್ ಬಳಿ ಬೈಕ್ ಸವಾರನನ್ನು ಬಲಿಪಡೆದ KSRTC

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಚಿಂತಾಮಣಿ ರಸ್ತೆ ಸಣ್ಣದೇನಹಳ್ಳಿ ಬಳಿ KSRTC ಬಸ್ ಬೈಕ್ ಸವಾರರನ್ನು ಬಲಿ ಪಡೆದಿದೆ. ಇಂದು ಸಂಜೆ 6-30 ರಿಂದ 7ಗಂಟೆ ಸುಮಾರಿಗೆ ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ.

ಕೆಎಸ್ಆರ್ಟಿಸಿ ಬಸ್ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಗೆ ರಾಯಚೂರು ಮೂಲದ ರಾಜೇಶ್(24) ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

ಬಸ್ ಡಿಕ್ಕಿಯಾದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದೆ. ಬೈಕ್ ಸವಾರ ರಾಜೇಶ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಹೊಸಕೋಟೆ DYSP ಉಮಾಶಂಕರ್ ಹಾಗೂ ಹೊಸಕೋಟೆ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪಘಾತ ಸಂಬಂಧ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ. KSRTC ಬಸ್ ಎಲ್ಲಿಂದ ಎಲ್ಲಿಗೆ ತೆರಳುತ್ತಿತ್ತು, ಚಾಲಕ ಯಾರು ? ಕಂಡಕ್ಟರ್ ಯಾರು? ಬಸ್‌ನಲ್ಲಿ ಎಷ್ಟು ಜನ ಸಂಚರಿಸುತ್ತಿದ್ದರು. ಅಥವಾ ಬಸ್ ಖಾಲಿಯಾಗಿತ್ತಾ.!? ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ

Edited By : Shivu K
PublicNext

PublicNext

07/07/2022 10:33 pm

Cinque Terre

57.8 K

Cinque Terre

1

ಸಂಬಂಧಿತ ಸುದ್ದಿ