ಬೆಂಗಳೂರು: ಈ ಸಿಸಿಟಿವಿ ದೃಶ್ಯಗಳನ್ನ ಒಮ್ಮೆ ನೋಡಿ. ಬೇಕರಿಯ ಮುಂದೆ ಜನ ನಿಂತಿರುತ್ತಾರೆ. ಮುಖ್ಯ ರಸ್ತೆಯಲ್ಲಿ ಬರುತ್ತಿದ್ದ ಕಾರು ಏಕಾಏಕಿ ಫುಟ್‌ಪಾಥ್‌ನ ಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆಯುತ್ತದೆ. ಅದೃಷ್ಟವಶಾತ್ ಕಾರು ಮರಕ್ಕೆ ಗುದ್ದಿ ಅಲ್ಲೇ ನಿಂತು ಬಿಡ್ತು. ಒಂದು ವೇಳೆ ಮರ ಇರಲಿಲ್ಲವೆಂದರೆ ಕಾರು ನೇರವಾಗಿ ಬೇಕರಿಯ ಮುಂದೆ ನಿಂತಿದ್ದ ಜನರ ಮೇಲೆ ಹರಿದು ಬಿಡುತ್ತಿತ್ತು. ಬರೀ ಇದೊಂದು ಸಿಸಿಟಿವಿ ದೃಶ್ಯವಲ್ಲ ಇನ್ನೊಂದು ಸಿಸಿಟಿವಿ ದೃಶ್ಯ ನೋಡಿ. ಮುಖ್ಯ ರಸ್ತೆಯ ಮೇಲೆ ವಾಹನಗಳು ವೇಗವಾಗಿ ಬರ್ತಾ ಇರುತ್ತೆ. ಕ್ರಾಸ್ ರೋಡ್‌ನಿಂದ ಇನ್ನೊಂದು ದ್ವಿಚಕ್ರವಾಹನ ಮುಖ್ಯ ರಸ್ತೆಯ ಕಡೆ ಟರ್ನ್ ತಗೆದುಕೊಳ್ಳುತ್ತದೆ. ಈ ವೇಳೆ ಹಿಂದೆಯಿಂದ ವೇಗವಾಗಿ ಬಂದ ಇನ್ನೊಂದು ಬೈಕ್ ಇನ್ನೊಂದು ಬೈಕಿಗೆ ಡಿಕ್ಕಿಯಾಗಿ ರಸ್ತೆಯ ಮೇಲೆ ಬೀಳ್ತಾರೆ.
ಇದು ಬಿಟಿಎಂ ಲೇಔಟ್‌ನ 29ನೇ ಮುಖ್ಯ ರಸ್ತೆ. ಈ ರಸ್ತೆಯಲ್ಲಿ ನೂರಾರು ವಾಹನಗಳು ದಿನನಿತ್ಯ ಸಂಚರಿಸುತ್ತವೆ. ಅದರಲ್ಲೂ ಈ ರಸ್ತೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇಗೆ ಹೋಗುವಂತ ರಸ್ತೆ. ಇಲ್ಲಿ ಯಾವುದೇ ರೀತಿಯ ಸ್ಪೀಡ್ ಬ್ರೇಕರ್‌ಗಳು ಇಲ್ಲದ ಕಾರಣ ಆಗಾಗ ಅಪಘಾತಗಳು ನಡೆಯುತ್ತಿವೆ. ರಸ್ತೆ ಖಾಲಿ ಇದ್ದರೆ ಸಾಕು ವಾಹನಗಳು ವೇಗವಾಗಿ ಬಂದು ಈ ಸ್ಥಳದಲ್ಲಿ ಆಕ್ಸಿಡೆಂಟ್ ಆಗಿ ಬಿಡುತ್ತವೆ.
ಈ ರಸ್ತೆಯ ಉದ್ದಗಲಕ್ಕೂ ಯಾವುದೇ ರೀತಿಯ ಸ್ಪೀಡ್ ಬ್ರೇಕರ್‌ಗಳು ಇಲ್ಲದ ಕಾರಣ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇವೆ. ಕೂಡಲೇ ಟ್ರಾಫಿಕ್ ಪೊಲೀಸರು ಎಚ್ಚೆತ್ತುಕೊಂಡು ರಸ್ತೆಯ ಮೇಲೆ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಬೇಕು. ಇದರಿಂದ ಅಪಘಾತಗಳಿಗೆ ಕಡಿವಾಣ ಹಾಕಬಹುದಾಗಿದೆ ಎನ್ನುವುದು ಪಬ್ಲಿಕ್ ಅಭಿಪ್ರಾಯ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
24/05/2022 05:01 pm