ಆನೇಕಲ್ : ಬೈಕ್ ಸವಾರನ ಮೇಲೆ ಟಿಪ್ಪರ್ ಹರಿದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಹೀಲಲಿಗೆ ಬಳಿ ನಡೆದಿದೆ.
ಇನ್ನು ಟಿಪ್ಪರ್ ಸವಾರನ ಮೇಲೆ ಹರಿದ ಪರಿಣಾಮ ದೇಹ ಛಿದ್ರ ಛಿದ್ರವಾಗಿ ಗುರುತು ಸಿಗದಂತ್ತಾಗಿದೆ.
ಹೌದು ರಾಮಸಾಗರ ಮೂಲದ ವ್ಯಕ್ತಿಯೊಬ್ಬರು ಇಂದು ಬೆಳಗ್ಗೆ ಚಿಕನ್ ತರಲು ಬೈಕ್ ಮೇಲೆ ಅಂಗಡಿಗೆ ಬಂದಿದ್ದರಂತೆ ಆ ವೇಳೆ ಬೈಕ್ ಸವಾರನಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಆಗ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಟಿಪ್ಪರ್ ಲಾರಿ ಹರಿದಿದೆ.
ಇನ್ನು ಮೃತದೇಹವನ್ನು ಹೊರ ತೆಗೆಯಲಾದ ರೀತಿಯಲ್ಲಿ ಛಿದ್ರವಾಗಿದೆ. ಸ್ಥಳಕ್ಕೆ ಸೂರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿ ಗುರುತು ಪತ್ತೆಗಾಗಿ ಮಾಹಿತಿ ಕಲೆಹಾಕುತ್ತಿದ್ದಾರೆ.
PublicNext
24/05/2022 11:58 am