ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಾದಚಾರಿಗಳ ಮೇಲೆ‌ ಹರಿದ ಯಮರೂಪಿ ಕಾರು: ಒಬ್ಬನಸಾವು, ಮೂವರಿಗೆ ಗಾಯ

ಬೆಂಗಳೂರು: ಯಮರೂಪಿ ಕಾರೊಂದು ನಿಯಂತ್ರಣ ತಪ್ಪಿ ಪಾದಾಚಾರಿಗಳಿಗೆ ಮೇಲೆ ಹರಿದಿದೆ. ಪರಿಣಾಮ‌ ಘಟನೆಯಲ್ಲಿ ಓರ್ವ ಮೃತಪಟ್ಟರೆ ಮೂವರು ಗಾಯಗೊಂಡಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆ ಬಳಿ ಈ ಘಟನೆ ನಡೆದಿದೆ. ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಬೆಳಗ್ಗೆ 7 ಗಂಟೆ ವೇಳೆ ಘಟನೆಯಲ್ಲಿ ಸುರೇಶ್ ಸಾವನ್ನಪ್ಪಿದರೆ ಸಚಿನ್, ಶಿವರಾಜ್ ಹಾಗೂ ಶೈಲೇಂದ್ರ ಎಂಬುವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ದೃಶ್ಯ ಭಯನಾಕವಾಗಿದೆ. ಘಟನೆಗೆ ಕಾರಣರಾದ ಮುಕೇಶ್ ಎಂಬಾತನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಧಾರವಾಹಿಯೊಂದರ ಸಹಾಯಕ‌ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಮುಕೇಶ್ ಇಂದು‌‌‌ ಶೂಟಿಂಗ್ ಮುಗಿಸಿಕೊಂಡು ಕತ್ರಿಗುಪ್ಪೆ‌ ಜಂಕ್ಷನ್‌ನಿಂದ ಇಟ್ಟಮಡು ಜಂಕ್ಷನ್‌ಗೆ ಕಡೆ ಬರುವಾಗ ಚಂದನ್ ಮೋಟಾರ್ ಷೋ‌ರೂಮ್ ಬಳಿ ವೇಗವಾಗಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ್ದರಿಂದ ಘಟನೆ ನಡೆದಿದೆ ಎಂದು ಹೆಳಲಾಗ್ತಿದೆ‌.

ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿಗಳು ಎತ್ತರಕ್ಕೆ ಹಾರಿ ಬಿದ್ದಿದ್ದಾರೆ. ಜೊತೆಗೆ ಪಾರ್ಕ್ ಮಾಡಲಾಗಿದ್ದ ಕಾರು ಗುದ್ದಿದ್ದರಿಂದ ಎರಡು ಕಾರುಗಳು ಜಖಂಗೊಂಡಿವೆ. ಗಾಯಗೊಂಡಿದ್ದ ನಾಲ್ವರನ್ನು ಆಸ್ಪತ್ರೆಗೆ ಸೇರಿಸಿದ್ದು ಈ ಪೈಕಿ ಸುರೇಶ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Manjunath H D
PublicNext

PublicNext

20/05/2022 04:06 pm

Cinque Terre

50.64 K

Cinque Terre

0

ಸಂಬಂಧಿತ ಸುದ್ದಿ