ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 3 ಕಾರುಗಳ ನಡುವೆ ಭೀಕರ ಸರಣಿ ಅಪಘಾತ- ತಪ್ಪಿದ ಭಾರಿ ಅನಾಹುತ.!

ಹೊಸಕೋಟೆ: ಅತಿ ವೇಗ ತಿಥಿ ಬೇಗ ಅನ್ನೋ ಮಾತಿದೆ. ಅದೇ ರೀತಿ ಅಜಾಗರೂಕತೆ ಮತ್ತು ಬೇಜವಾಬ್ದಾರಿ ಡ್ರೈವಿಂಗ್‌ನಿಂದ ಸರಣಿ ಅಪಘಾತಗಳಾಗಿ ಜನ ತೀವ್ರ ತೊಂದರೆಗೆ ಒಳಗಾಗುತ್ತಲೇ ಇದ್ದಾರೆ. ಬುಧವಾರ ಕೂಡ ಹೊಸಕೋಟೆ ನಗರದ ಚಿಂತಾಮಣಿ ರಸ್ತೆ ಮೈಲಾಪುರ ಗೇಟ್ ಬಳಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.

ಭೀಕರ ರಸ್ತೆ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ‌ ಸಂಭವಿಸಿಲ್ಲ ಎನ್ನುವುದೇ ಸಮಾಧಾನಕರ ಸಂಗತಿ. ಮಾರುತಿ ಕಾರು ಮಹೀಂದ್ರಾ ಎಕ್ಸ್‌ಯುವಿಗೆ ಡಿಕ್ಕಿ ಹೊಡೆದಿದೆ. ನಂತರ ಮಹಿಂದ್ರಾ ಎಕ್ಸ್‌ಯುವಿ ಸ್ಯಾಂಟ್ರೊ ಕಾರಿಗೆ ಗುದ್ದಿದೆ. ಹೀಗೆ ಪರಸ್ಪರ ಕಾರುಗಳು ಒಂದಕ್ಕೊಂದು ಗುದ್ದಿಕೊಂಡ ಕಾರಣ ಸಂಪೂರ್ಣ ನಜ್ಜುಗುಜ್ಜಾಗಿವೆ.

ಮೂರು ಕಾರುಗಳಲ್ಲಿದ್ದ ಗಾಯಾಳುಗಳನ್ನು ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭೀಕರ ರಸ್ತೆ ಅಪಘಾತ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ..

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್‌, ಹೊಸಕೋಟೆ.

Edited By : Shivu K
PublicNext

PublicNext

05/05/2022 08:53 am

Cinque Terre

39.68 K

Cinque Terre

0

ಸಂಬಂಧಿತ ಸುದ್ದಿ