ನೆಲಮಂಗಲ : ಜೀವನ ನಿರ್ವಹಣೆಗೆ ಅಂತ ಹೋಟೆಲ್ ನಲ್ಲಿ ಕೆಲಸ ಮಾಡ್ಕೊಂಡಿದ್ದ ಮಹಿಳೆಗೆ ವಿದ್ಯುತ್ ಪಸರಿಸಿ ಮೃತಪಟ್ಟ ದುರ್ಘಟನೆ ಬೆಂ.ಗ್ರಾ.ಜಿಲ್ಲೆ ನೆಲಮಂಗಲ ತಾಲ್ಲೂಕು ದಾಬಸ್ ಪೇಟೆ ಸಮೀಪದ ನಿಡವಂದ ಕಾಲೋನಿಯಲ್ಲಿ ನಡೆದಿದೆ.
ಇನ್ನೂ ನಿಡವಂದ ಕಾಲೋನಿಯ ಎಸ್ ಆರ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ಮಹಿಳೆ 50 ವರ್ಷದ ಸಿದ್ದಮ್ಮ ಮೃತಪಟ್ಟ ದುರ್ಧೈವಿ ಮಹಿಳೆಯಾಗಿದ್ದು ತಮ್ಮ ಜೀವನೋಪಾಯಕ್ಕಾಗಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ರು. ಆದ್ರೆ ಎಂದಿನಂತೆ ಇಂದೂ ಕೂಡ ಹೋಟೆಲ್ ಲ್ಲಿ ಗ್ರಾಹಕರು ಬಳಸಿದ ತಟ್ಟೆ ಲೋಟಗಳನ್ನು ತೊಳೆಯುವಾಗ ಪಕ್ಕದಲ್ಲೇ ಇದ್ದ ಪಂಪಿನಿಂದ ವಿದ್ಯುತ್ ಹರಿದು ಸಿದ್ದಮ್ಮ ಸಾವನ್ನಪ್ಪಿದ್ದಾರೆ.
ಸಿದ್ದಮ್ಮನ ಸಾವಿನ ವಿಷಯ ತಿಳಿದ ಸಂಬಂಧಿಕರು ಹಾಗೂ ಗ್ರಾಮಸ್ಥರು ಸಿದ್ದಮ್ಮಳನ್ನ ದಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಅಷ್ಟರಲ್ಲಾಗಲೇ ಸಿದ್ದಮ್ಮನ ಜೀವ ಹೋಗಿತ್ತು. ಸಿದ್ದಮ್ಮನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನೂ ಸರ್ಕಾರಿ ಆಸ್ಪತ್ರೆಗೆ ನೆಲಮಂಗಲ ತಾಲ್ಲೂಕು ದಂಡಾಧಿಕಾರಿ ಕೆ.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ರು. ಈ ಘಟನೆಗೆ ಸಂಬಂಧಿಸಿದಂತೆ ದಾಬಸ್ ಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
PublicNext
24/03/2022 10:59 pm