ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಸ್ಕಾಂ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿ..!

ಬೆಂಗಳೂರು: ನಗರದ ಮಂಗನಳ್ಳಿ ಸಮೀಪದಲ್ಲಿ ನಿನ್ನೆ (ಬುಧವಾರ) ಬೆಸ್ಕಾಂ ಟ್ರಾನ್ಸ್ಫಾರ್ಮರ್ ಸಿಡಿದು ಮಂಗನಳ್ಳಿ ಗ್ರಾಮದ ತಂದೆ ಶಿವರಾಜು (50) ವರ್ಷದವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಈ ಹಿನ್ನಲೆ ಸ್ಥಳದಲ್ಲಿ ಸುಟ್ಟು ಹೋದ ಮಗಳು 18 ವರ್ಷದ ಚೈತನ್ಯಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚೈತನ್ಯ ಇಂದು ಅಸುನೀಗಿದ್ದಾಳೆ.

ಘಟನಾ ಸ್ಥಳದಲ್ಲೇ ಆಂಬುಲೆನ್ಸ್ ತಡೆದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬದಲ್ಲಿ, ಬದುಕಿರೋದು ಇನ್ನು ರತ್ನಮ್ಮ ಮಾತ್ರ. ಅವರಿಗೆ ಸರಿಯಾದ ಪರಿಹಾರ ಕೊಡಬೇಕು, ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಅವರನ್ನು ಕರ್ತವ್ಯದಿಂದ ಅಮಾನತ್ತು ಮಾಡಬೇಕು ಎಂದು ಗೋಳಾಡುತ್ತಾ, ದಾರಿ ಮಧ್ಯದಲ್ಲೇ ಕುಳಿತುಕೊಂಡು ಎಂದು ಸ್ಥಳೀಯರು ಹೋರಾಟ ಮಾಡಿದರು.

ಸ್ಥಳಕ್ಕೆ ಭೇಟಿ ನೀಡಿದ ಯಶವಂತಪುರ ಶಾಸಕ, ಸಚಿವ ಎಸ್.ಟಿ ಸೋಮಶೇಖರ್ ಅವರು, ನಮ್ಮ ಕ್ಷೇತ್ರದಲ್ಲಿ ಈ ಘಟನೆ ಸಂಭವಿಸಿರುವುದು ನನಗೆ ಬೇಸರ ತಂದಿದೆ. ಇದಕ್ಕೆ ಕಾರಣವಾದ ಬೆಸ್ಕಾಂ ಅಧಿಕಾರಿಗಳನ್ನ ಸಸ್ಪೆಂಡ್ ಮಾಡುತ್ತೇವೆ. ಮೇತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ದಂತೆ, ಇಬ್ಬರಿಗೂ 20 ಲಕ್ಷ ರೂ. ಚೆಕ್ ನೀಡುತ್ತೇವೆ. ಅವರಿಗೆ ಕೆಲಸ ಕೊಡುವುದಾಗಿ ಮಾತನಾಡಿದ್ದೇನೆ,‌ ಮುಂದಿನ ಕಾರ್ಯ ಮಾಡಿ' ಎಂದು ಭರವಸೆ ನೀಡಿದ್ದಾರೆ.

ಒಟ್ಟಾರೆ ಏನೇ ಆದ್ರು ಬೆಸ್ಕಾಂ ನಿರ್ಲಕ್ಷ್ಯಕ್ಕೆ ಅಮಾಯಕರ ಜೀವ ಬಲಿಯಾಗಿದೆ. ಇನ್ನಾದರೂ ಎಚ್ಚೆತ್ತು ಸರಿಯಾದ ಸಮಯಕ್ಕೆ ಕಂಬಗಳ ಪರಿಶೀಲನೆ ನಡೆಸಬೇಕಿದೆ.

Edited By : Shivu K
PublicNext

PublicNext

24/03/2022 06:20 pm

Cinque Terre

35.36 K

Cinque Terre

0

ಸಂಬಂಧಿತ ಸುದ್ದಿ