ಬೆಂಗಳೂರು: ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೂರಿನ ಟೇಕಲ್ ಬಳಿ ರೈಲು ಡಿಕ್ಕಿಯಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಟೇಕಲ್ ನ ಶಬಾಜ್ ಅಹ್ಮದ್ ಷರೀಫ್(24) ಮೃತ ಯುವಕ. ಬೆಂಗಳೂರಿನ ರಾಜಾಜಿನಗರದ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಬರುತ್ತಿದ್ದ ವೇಳೆ ಬೆಳಗ್ಗೆ 8.30ಕ್ಕೆ ಈ ಅಪಘಾತ ಘಟಿಸಿದೆ. ಯುವಕ ಮೊಬೈಲ್ ಹಿಯರ್ ಫೋನ್ ಬಳಸಿ ಮತ್ತೊಂದು ಕಡೆಯಿಂದ ಬರ್ತಿದ್ದ ರೈಲಿನ ವೇಗ ಗಮನಿಸದೇ ಇದ್ದದ್ದೇ ದುರಂತಕ್ಕೆ ಕಾರಣ ಎನ್ನಲಾಗ್ತಿದೆ.
ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಶತಾಬ್ದಿ ಎಕ್ಸ್‌ಪ್ರೆಸ್ 12028 ರೈಲಿಗೆ ಸಿಲುಕಿ ಯುವಕ ದುರಂತ ಅಂತ್ಯ ಕಂಡಿದ್ದಾನೆ. ಕೋಲಾರದಿಂದ ಬೆಂಗಳೂರಿಗೆ ಬರಲು ಪ್ಯಾಸೆಂಜರ್ ರೈಲು, ಮರಿಕುಪ್ಪಂನಿಂದ ಬೆಂಗಳೂರಿಗೆ ಬರಲು ಮತ್ತೊಂದು ಪ್ಯಾಸೆಂಜರ್ ರೈಲು ನಿಂತಿದ್ದರಿಂದ ಯುವಕ, ಯಾವ ಕಡೆಯಿಂದ ರೈಲು ಬರುತ್ತದೆ ಎಂಬುದನ್ನು ಗ್ರಹಿಸಿರಲಿಲ್ಲ.
ಮೊಬೈಲ್ ಹಿಯರ್ ಪೋನ್ ಬಳಸುವ ಯುವಜನರು ಹೀಗೆ ಕ್ಷುಲ್ಲಕ ಕಾರಣಗಳಿಗೆ ಬಲಿಯಾಗ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮುಂದುವರೆಸಿದ್ದಾರೆ.
ಸುರೇಶ್ ಬಾಬು,
Public Next ಬೆಂಗಳೂರು
PublicNext
09/03/2022 05:05 pm