ನೆಲಮಂಗಲ: ತುಮಕೂರು ಹೆದ್ದಾರಿ ಫ್ಲೈಓವರ್ ಮೇಲಿನ ರಸ್ತೆಬದಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗು ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ತಾಯಿ ಗಾಯ ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಘಟನೆ ನೆಲಮಂಗಲದ ದಾಬಸ್ ಪೇಟೆ ಬಳಿ ನೆಡೆದಿದೆ.
ಇನ್ನೂ ಶಿವಮೊಗ್ಗ ಮೂಲದ ಇನಾಯತ್ 27 ವರ್ಷ ಹಾಗೂ ಅನಮ್ ಉಮಾನ 9ವರ್ಷ ಅಪಘಾತದಲ್ಲಿ ಮೃತಪಟ್ಟಿದ್ದು, ಮೃತ ಇನಾಯತ್ ಪತ್ನಿ ನಾಜೀರ ಭಾನು 25 ವರ್ಷ ಗಾಯಗೊಂಡು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ
ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Kshetra Samachara
04/03/2022 09:27 am