ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 75 ಕುಣಿಗಲ್ ರಸ್ತೆಯಲ್ಲಿರುವ ನೆಲಮಂಗಲ ತಾಲ್ಲೂಕಿನ ಹುಣಸೇಘಟ್ಟಪಾಳ್ಯ ಗ್ರಾಮದ ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನೆಲಮಂಗಲದ ಹುಣಸೇಘಟ್ಟಪಾಳ್ಯ ನಿವಾಸಿ ಶಿವಣ್ಣ (50) ಮೃತ ದುರ್ದೈವಿ. ಶ್ರೀನಿವಾಸಪುರ ಗ್ರಾಮದ ಮರೇಶ್ 27 ಗಂಭೀರ ಗಾಯಗೊಂಡು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
11/02/2022 01:36 pm