ನೆಲಮಂಗಲ: ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿ ಮೂವರ ಸ್ಥಿತಿ ಗಂಭೀರವಾದ ಘಟನೆ ನೆಲಮಂಗಲ ರಾ.ಹೆ 4 ತುಮಕೂರು ರಸ್ತೆಯ ಬಿನ್ನಮಂಗಲ ಬಳಿ ನಡೆದಿದೆ.
ಬೆಂಗಳೂರು ಲಗ್ಗೆರೆ ನಿವಾಸಿ ಮುಸಾಫಿರ್ 14 ವರ್ಷ ಮೃತ ದುರ್ದೈವಿ, ಸ್ವಗ್ರಾಮ ಕುದೂರಿಗೆ ತೆರಳಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸದ್ಯ ಗಾಯಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/01/2022 07:41 pm