ಬೆಂಗಳೂರು: ಆ ಕುಟುಂಬ ನೂರೆಂಟು ಕನಸು ಕಟ್ಕೊಂಡು, ಆ ಕುಡಿಯನ್ನ ಸಾಕಿಕೊಂಡು, ಬೆಂಗಳೂರಿನಲ್ಲಿ ವಾಸಿಸುತಿತ್ತು, ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿದ್ದ ಈ ಕುಟುಂಬದ ತಾಯಿ ಮತ್ತು ಮಗು ಬಾರದ ಲೋಕಕ್ಕೆ ತೆರಳಿದ್ದಾರೆ. ಏನಿದು ಘಟನೆ ಅಂತೀರಾ, ಈ ಸ್ಟೋರಿ ನೋಡಿ..
ಒಂದೆಡೆ ಸ್ಟ್ರಚರ್ ಮೇಲೆ ತಾಯಿ ಮೃತದೇಹ ಬಂದ್ರೆ, ಮತ್ತೊಂದೆಡೆ ಕುಟುಂಬಸ್ಥರ ಮಡಿಲಿನಲ್ಲಿ ಪುಟ್ಟು ಮಗುವಿನ ಮೃತದೇಹ, ಇತ್ತ ಕುಟುಂಬದ ಕುಡಿಗಳನ್ನ ಕಳೆದುಕೊಂಡು ಮುಗಿಲು ಮಟ್ಟಿದ ಹಿರಿಯರ ಆಕ್ರಂದನ. ಈ ದೃಶ್ಯಗಳು ಕಂಡು ಬಂದದ್ದು ಬೆಂಗಳೂರಿನ ಹೆಸರಘಟ್ಟ ರಸ್ತೆಯ ಚಿಕ್ಕಬಾಣವಾರದಲ್ಲಿ. ಹೌದು ಚಿಕ್ಕಬಾಣಾವರ ಬಳಿಯ ಗಣಪತಿ ನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ನರಸಿಂಹಮೂರ್ತಿ ಎಂಬುವರ ಪತ್ನಿ ಮಂಗಳ ಹಾಗೂ 7 ವರ್ಷದ ಪುಟ್ಟ ಮಗು ಗೌತಮಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಹೌದು ರಾಮನಗರ ಜಿಲ್ಲೆ ಮಾಗಡಿ ಮೂಲದ ನರಸಿಂಹಮೂರ್ತಿ ಜೀವನ ಸಾಗಿಸಿಕೊಳ್ಳಲು ಕಳೆದ 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲಸಿದ್ರು, ನರಸಿಂಹ ಮೂರ್ತಿ ಕೆಲಸಕ್ಕೆಂದು ತೆರಳಿದ್ದಾಗ ಮೃತ ಮಂಗಳ ಗ್ಯಾಸ್ ಗೀಜರ್ ಆನ್ ಮಾಡಿ ಸ್ನಾನ ಮಾಡಲು ಮುಂದಾಗಿದ್ರು. ಸ್ನಾನದ ಮನೆಗೆ ಒಳ್ಳೆ ಗಾಳಿ ಬೆಳಕು ಇಲ್ಲದ ಕಾರಣ ಗ್ಯಾಸ್‌ನ ಅನಿಲ ಸೋರಿಕೆ ಯಿಂದ ವಿಷಾನೀಲವಾಗಿ ಮಾರ್ಪಟ್ಟಿದೆ ಎನ್ನಲಾಗಿದ್ದು, ಅನಿಲ ವಾಸನೆ ಸೇವಿಸಿದ ತಾಯಿ ಮತ್ತು ಮಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ತುಂಬಾ ಹೊತ್ತು ಮಂಗಳ ಬಾಗಿಲು ತೆಗೆಯದಿದ್ದಾಗ ಮನೆಯ ಮಾಲಕಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆಗೆ ತಾಯಿ ಮಂಗಳ ಹಾಗೂ ಮಗಳು ಗೌತಮಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತಾಯಿ ಮತ್ತು ಮಗು ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಏನೇ ಆಗ್ಲಿ ಗ್ಯಾಸ್ ಗೀಸರ್‌ನಿಂದ ಅದೆಷ್ಟೋ ಅವಘಡಗಳು ಈ ಹಿಂದೆ ಸಂಭವಿಸಿದ ನಿದರ್ಶನಗಳಿವೆ. ಆದರೂ ಜನ ಎಚ್ಚೆತ್ತುಕೊಂಡಿಲ್ಲ.ಇನ್ನಾದರೂ ಜನ ಎಚ್ಚೆತ್ತು ಕೊಂಡು ಮುಂಜಾಗೃತೆ ವಹಿಸಲಿ ಅನ್ನೋದು ನಮ್ಮ ಆಶಯ.
PublicNext
16/01/2022 08:57 pm