ಬೆಂಗಳೂರು: ʼಕಲರ್ಸ್ ಕನ್ನಡʼ ವಾಹಿನಿಯ ಖ್ಯಾತ ರಿಯಾಲಿಟಿ ಶೋ ʼನಮ್ಮಮ್ಮ ಸೂಪರ್ ಸ್ಟಾರ್ʼ ಸ್ಪರ್ಧಿ ಸಮನ್ವಿ ಸಾವನ್ನಪ್ಪಿದ್ದಾಳೆ! ಇಂದು ಸಂಜೆ ತಾಯಿ ಅಮೃತಾ ನಾಯ್ಡು ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಲಾರಿ ಹರಿದು 7ರ ಹರೆಯದ ಸಮನ್ವಿ ಮೃತಪಟ್ಟಿದ್ದಾಳೆ.
ಅಪಘಾತದಲ್ಲಿ ಸಮನ್ವಿ ತಾಯಿ ಅಮೃತಾ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗರ್ಭಿಣಿಯಾಗಿರೋ ಅಮೃತಾ ಅವರ ಕೈ- ಕಾಲಿಗೆ ಪೆಟ್ಟಾಗಿದೆ. ಚಾಲಕ ವೇಗವಾಗಿ ಟಿಪ್ಪರ್ ಲಾರಿ ಚಲಾಯಿಸಿದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗ್ತಿದೆ.
ಕೋಣನಕುಂಟೆ ವಾಜರಹಳ್ಳಿ ರಸ್ತೆ ಬಳಿ ದುರ್ಘಟನೆ ನಡೆದಿದ್ದು, ಟಿಪ್ಪರ್ ಲಾರಿ ಚಾಲಕನ್ನು ವಶಕ್ಕೆ ಪಡೆಯಲಾಗಿದೆ. ಸಮನ್ವಿ ಖ್ಯಾತ ಹರಿಕಥೆ ವಿದ್ವಾಂಸ ಗುರುರಾಜ ನಾಯ್ಡು ಅವರ ಮೊಮ್ಮಗಳಾಗಿದ್ದು, ರಿಯಾಲಿಟಿ ಶೋನಲ್ಲೂ ಸಾಕಷ್ಟು ಹೆಸರು ಮಾಡಿದ್ದಳು.
PublicNext
13/01/2022 09:47 pm