ಬೆಂಗಳೂರು: ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ನಿಂತಲ್ಲೆ ಧಗಧಗ ಉರಿದು ಹೋದ ಘಟನೆ 8ನೇ ಮೈಲಿಯ ಹೆಸರುಘಟ್ಟ ರಸ್ತೆಯಲ್ಲಿರೋ ಗಾಯಿತ್ರಿ ಮೋಟಾರ್ಸ್ ನಲ್ಲಿ ಸಂಭವಿಸಿದೆ.
ಬೆನ್ಲಿಂಗ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಸಂಬಂಧಿಸಿದ ಗಾಯಿತ್ರಿ ಮೋಟಾರ್ಸ್ ನ ಸೇಲ್ಸ್ ಆ್ಯಂಡ್ ಸರ್ವೀಸ್ ಶೋ ರೂಂ ನಲ್ಲಿಯೇ ಈ ಅವಘಡ ಆಗಿದೆ.
ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಆಗಿಲ್ಲ. ಪೀಣ್ಯಾ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಾಗಲುಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದೆ.
PublicNext
31/12/2021 03:19 pm