ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಲ್ಲಿ ಬಹುತೇಕ ಅಪಘಾತಗಳು ಸಂಜೆ ಹೊತ್ತಲ್ಲೇ ಆಗೋದ್ಯಾಕೆ?

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಅಪಘಾತಗಳು ಬಹುತೇಕವಾಗಿ ಸಂಜೆಯ ಹೊತ್ತಲ್ಲೇ ನಡೆಯುತ್ತಿವೆ ಎಂದು ವರದಿಯೊಂದರ ಮೂಲಕ ತಿಳಿದು ಬಂದಿದೆ. ಈ ಸಮಯದಲ್ಲಿ ರಸ್ತೆ ಅಪಘಾತಗಳು ಸಂಭವಿಸುವುದು ಹೆಚ್ಚು ಎನ್ನುವ ವರದಿ ಬಂದಿದೆ. ಸಂಜೆ ವೇಳೆಯ ಅತಿಯಾದ ಸಂಚಾರ ದಟ್ಟಣೆ ಇದಕ್ಕೆ ಕಾರಣ ಎನ್ನಬಹುದು.ಇನ್ನು ಸಂಜೆ ವೇಳೆ ನಡೆಯುವ ಅಪಘಾತಗಳಲ್ಲಿ 21-29 ವಯೋಮಾನದವರೇ ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಕಳೆದ 7 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತ ಸಂಬಂಧ ದಾಖಲಾದ ಎಫ್ಐಆರ್‌ಗಳನ್ನು ಅಧ್ಯಯನಕ್ಕೊಳಪಡಿಸಿದಾಗ ಈ ಮಾಹಿತಿ ಲಭ್ಯವಾಗಿದೆ. ರಸ್ತೆ ಅಪಘಾತಕ್ಕೆ ತುತ್ತಾಗುತ್ತಿರುವವರಲ್ಲಿ 40- 59ರ ವಯೋಮಾನದ ಮಹಿಳೆಯರು ಕೂಡ ಸೇರಿದ್ದಾರೆ.

ಶೇ.80ರಷ್ಟು ಮಂದಿ ಬೈಕ್‌ಗಳನ್ನು ಬಿಟ್ಟು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆ ಇದರಿಂದಾಗಿ ಅಪಘಾತ ಪ್ರಕರಣಗಳು ಸ್ವಲ್ಪ ಕಡಿಮೆಯಾಗಿದೆ. ದೇಶದಲ್ಲಿ 2020ರಲ್ಲಿ ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಮರಣ ಹೊಂದಿದವರ ಸಂಖ್ಯೆ 1.20 ಲಕ್ಷ ಆಗಿದೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ, ಕೊರೊನಾ ಲಾಕ್‌ಡೌನ್‌ ಹೊರತಾಗಿಯೂ ಪ್ರತಿದಿನ ಸರಾಸರಿ 328 ಜನರು ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

25/12/2021 05:13 pm

Cinque Terre

1.23 K

Cinque Terre

0

ಸಂಬಂಧಿತ ಸುದ್ದಿ