ಮಂಗಳೂರು: ಸಮುದ್ರ ವಿಹಾರಕ್ಕೆಂದು ಬಂದು ಪಣಂಬೂರಿನಲ್ಲಿ ಕಡಲಿಗಿಳಿದ ಬೆಂಗಳೂರಿನ ಯುವಕನೋರ್ವ ಸಮುದ್ರಪಾಲಾದ ಘಟನೆ ನಿನ್ನೆ ಸೋಮವಾರ ನಡೆದಿದೆ. ಬೆಂಗಳೂರಿನ ದಿನೇಶ್(20) ನೀರು ಪಾಲಾಗಿರುವ ಯುವಕ.
ನಿನ್ನೆ ರಾತ್ರಿ ಕಾರು ಮಾಡಿಕೊಂಡು 8 ಮಂದಿ ಯುವಕರ ತಂಡ ಬೆಂಗಳೂರಿನಿಂದ ಮಂಗಳೂರಿಗೆ ಬಂದಿತ್ತು. ಇಂದು ಮಧ್ಯಾಹ್ನ ಅವರು ಪಣಂಬೂರು ಬೀಚ್ ಗೆ ಆಗಮಿಸಿದ್ದರು. ಈ ವೇಳೆ ಮೋಜು ಮಾಡಲೆಂದು ಸಮುದ್ರಕ್ಕಿಳಿದ ದಿನೇಶ್ ಸಮುದ್ರದಲೆಗೆ ಕೊಚ್ಚಿಕೊಂಡು ಹೋಗಿದ್ದಾರೆ.
ಅವರೊಂದಿಗೆ ಬಂದಿದ್ದ ತಂಡದ ಇತರರು ದಿನೇಶ್ ರಕ್ಷಣೆಗೆ ಯತ್ನಿಸಿದರೂ, ಅವರು ಸಮುದ್ರಪಾಲಾಗಿದ್ದಾರೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಕಾಟ ಮುಂದುವರಿದಿದೆ.
Kshetra Samachara
09/11/2021 08:10 am