ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿ ಬಳಿ ಲಾರಿ ಬೈಕ್ ನಡುವೆ ಡಿಕ್ಕಿ ಬ್ಯಾಪ್ಟಿಸ್ಟ್ ಉದ್ಯೋಗಿ ಸಾವು

ತಮಿಳುನಾಡು ರಿಜಿಸ್ಟ್ರೇಷನ್ ಲಾರಿಯೊಂದು ರಸ್ತೆ ಹಂಪ್ ಜಂಪ್ ಮಾಡಿ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಎಂಬಿನೇಂಜರ್ ಎಂಬಾತ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

ಚಿಕ್ಕಬಳ್ಳಾಪುರ ಮೂಲದ ಈತ ಬೆಂಗಳೂರಿನ ಹೆಬ್ಬಾವು ಬ್ಯಾಪ್ಟಿಸ್ಟ್ ಆಸ್ಪತ್ರೆಯ ನೌಕರ. ಬೈಕ್ ಹಿಂಬದಿಯಲ್ಲಿದ್ದ ವ್ಯಕ್ತಿಯ ಸ್ಥಿತಿಯೂ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತ ವ್ಯಕ್ತಿ ಹಾಗೂ ಗಾಯಾಳು ಬ್ಯಾಪ್ಟಿಸ್ಟ್ ಆಸ್ಪತ್ರೆಯ ಎಕ್ಸರೇ ವಿಭಾಗದ ಉದ್ಯೋಗಿಗಳು ಎನ್ನಲಾಗಿದೆ.

ಸಹಪಾಠಿ ವಿದೇಶಕ್ಕೆ ಹೋಗುವ ಹಿನ್ನೆಲೆಯಲ್ಲಿ, ರಾತ್ರಿ ಸ್ನೇಹಿತನ ಮನೆಗೆ ತೆರಳಿ ಇಂದು ಬೆಳಿಗ್ಗೆ ಅವರನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಡಲು ಹೋಗುವ ವೇಳೆ ದುರಂತ ಘಟನೆ ಸಂಭವಿಸಿದೆ. ದೇವನಹಳ್ಳಿ ಮತ್ತು ವಿಜಯಪುರ ನಡುವಿನ ಯಲಿಯೂರು ಗೇಟ್ ಬಳಿ

ಇಂದು ಬೆಳಿಗ್ಗೆ ಎಂಟು ಗಂಟೆಗೆ ಅಪಘಾತ ನಡೆದಿದೆ. ಘಟನೆಗೆ ಚಾಲಕನ ಅಜಾಗರೂಕತೆ ಹಾಗೂ ರಸ್ತೆಯ ಅವೈಜ್ಞಾನಿಕ ಹಂಪ್ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಜಯಪುರ ಪೊಲೀಸರು ಘಟನೆ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.

Edited By :
PublicNext

PublicNext

29/06/2022 02:59 pm

Cinque Terre

28.64 K

Cinque Terre

0

ಸಂಬಂಧಿತ ಸುದ್ದಿ