ಇಂದು ಮುಂಜಾನೆ ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಬ್ಲಾಕ್ ಬಸ್ಟರ್ ಮೂವಿ ಕೆಜಿಎಫ್ ನಟ ಬೆನ್ಜ್ ಕಾರು ಅಫಘಾತಕ್ಕಿಡಾಗಿದೆ.
ಕೆಜಿಎಫ್ ಸಿನಿಮಾದಲ್ಲಿ ರಾಖಿ ಬಾಯ್ ನಷ್ಟೇ ಹೆಸರು ಮಾಡಿದ್ದ ಆಂಡ್ರ್ಯೂಸ್ ಪಾತ್ರ ಮಾಡಿದ್ದ ಅವಿನಾಶ್ ಕಾರು ಅಪಘಾತಕ್ಕಿಡಾಗಿದೆ. ಅವಿನಾಶ್ ಚಲಿಸುತ್ತಿದ್ದ ಬೆನ್ಜ್ ಕಾರಿಗೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಐಷಾರಾಮಿ ಕಾರು ಸಂಪೂರ್ಣ ಜಖಂ ಆಗಿದೆ.
ಮುಂಜಾನೆ ಆರು ಗಂಟೆ ಸಮಯಲ್ಲಿ ಎಂಜಿ ರಸ್ತೆ ಕಡೆ ಹೋಗುವಾಗ ಕ್ಯಾಂಟರ್ ಚಾಲಕನ ಅಜಾಗರೂಕತೆ ಚಾಲಕನೆಯಿಂದ ಅಪಘಾತ ಸಭವಿಸಿದ್ದು ಘಟನೆ ಹಿನ್ನೆಲೆ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರ ದಾಖಲಾಗಿದೆ. ಘಟನೆ ಸಂಬಂಧ ಕ್ಯಾಂಟರ್ ಚಾಲಕ ಶಿವನಗೌಡನನ್ನು ಬಂಧಿಸಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
PublicNext
29/06/2022 08:23 pm