ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಬಳ್ಳಾರಿ ಸಮಾವೇಶ ಯಶಸ್ಸಿಗೆ ಹೊಳೆಬಸು ಶೆಟ್ಟರ್ ಮನವಿ

ಬಾಗಲಕೋಟೆ: ಭಾರತ ಜೋಡೋ ಯಾತ್ರೆ ಆಗಮನ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ ಸಮಾವೇಶ ಯಶಸ್ಸಿಗೆ ನಾವೆಲ್ಲ ಸಾಥ್ ನೀಡೋಣ ಎಂದು ಯುವ ಮುಖಂಡ ಹೊಳೆಬಸು ಶೆಟ್ಟರ್ ಹೇಳಿದ್ದಾರೆ.

ಬಾದಾಮಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಭಾರತ ಜೋಡೋ ಯಾತ್ರೆ ನಿಮಿತ್ತ ಶನಿವಾರ ಬಾದಾಮಿಯ ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಪ್ರತಿ ವಾರ್ಡ್ ನಿಂದಲೂ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ‌ ಕೆಲಸ ಮಾಡೋಣ ಎಂದರು.

ಬ್ಲಾಕ್ ಕಾಂಗ್ರೆಸ್ ಪಕ್ಷದ ಅದ್ಯಕ್ಷರಾದ ಹನಮಂತಗೌಡ ಯಕ್ಕಪ್ಪನವರ ವಹಿಸಿದ್ದರು. ಹಿರಿಯರಾದ ಮುಚಖಂಡಯ್ಯ ಹಂಗರಗಿ, ಡಾ.ಎಂ. ಎಚ್. ಚಲವಾದಿ, ಪಿ.ಆರ್.ಗೌಡರ, ಎಫ್.ಆರ್. ಪಾಟೀಲ, ರಾಜಮಹ್ಮದ ಬಾಗವಾನ,‌ ನಾಗಪ್ಪ ಅಡಪಟ್ಟಿ, ಈರನಗೌಡ ಕರಿಗೌಡ್ರ, ,ಗಿರೀಶ ಅಂಕಲಗಿ, ಬಾಲಪ್ಪ ನಂದೆಪ್ಪನವರ ಇದ್ದರು.

Edited By : Vijay Kumar
PublicNext

PublicNext

08/10/2022 07:23 pm

Cinque Terre

14.24 K

Cinque Terre

0