ರಬಕವಿ-ಬನಹಟ್ಟಿ: ವಿಶ್ವಕ್ಕೆ ಅನ್ನ, ಬಟ್ಟೆ ನೀಡುವ ರೈತ ಮತ್ತು ನೇಕಾರರು ಎರಡು ಕಣ್ಣುಗಳಿದ್ದಂತೆ, ನೇಕಾರ ಕಲ್ಯಾಣಕ್ಕೆ ಹೋರಾಟ ನಡೆಸಲು ನಾವೆಲ್ಲರೂ ರಾಷ್ಟೀಯ ನೇಕಾರ ಸೇವಾ ಸಂಘದೊಡನೆ ಬದ್ಧರಾಗಿದ್ದೇವೆಂದು ಆನಂದ ಜಗದಾಳ ಹೇಳಿದರು.
ಬನಹಟ್ಟಿಯ ದಾನಮ್ಮದೇವಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. 55 ವಯೋಮಾನದ ನೇಕಾರರಿಗೆ ಮಾಸಿಕ ಐದು ಸಾವಿರ ಮಾಸಾಶನ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳು ನೇಕಾರಿಕೆ ಉದ್ಯೋಗ ಉಳಿಯಲು ಮುಖ್ಯವಾಗಿವೆ. ಪರಮಾನಂದ ಭಾವಿಕಟ್ಟಿ, ಮಹಾದೇವ ನುಚ್ಚಿ ಮಾತನಾಡಿ, ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಕೆಎಚ್‌ಡಿಸಿ ನಿಗಮದ ಅಧ್ಯಕ್ಷರ ಹಗರಣದ ಬಗ್ಗೆ ತಪ್ಪು ಆರೋಪ ಮಾಡುವುದನ್ನು ನಿಲ್ಲಿಸಬೇಕು. ೫೩ ನೇಕಾರರ ಆತ್ಮಹತ್ಯೆಗಳು ನಡೆದಿದ್ದು, ಅವಲಂಬಿತ ಕುಟುಂಬಸ್ಥರಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ನೇಯ್ಗೆ ಉದ್ಯಮದ ನೈಜ ಸಮಸ್ಯೆಗೆ ಕಾರಣ ತಿಳಿದು ಉದ್ಯಮದ ಉಳಿಕೆಗೆ ಪರಿಹಾರ ಕಾಣಬೇಕು ಎಂದರು.
Kshetra Samachara
11/12/2024 05:15 pm