ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನೀರಿನಲ್ಲಿ ಆಸ್ತಿಗಳನ್ನು ಕಳೆದುಕೊಂಡ ಸಂತ್ರಸ್ತರ ಮಕ್ಕಳಿಗೆ ಶಿಕ್ಷಣದಲ್ಲಿ ನಿಗದಿ ಸರ್ಕಾರ ಪಡಿಸಿದ್ದ ಮೀಸಲಾತಿ ಮುಂದುವರಿಸಬೇಕು ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಎ.ಎ. ದಂಡಿಯಾ ಒತ್ತಾಯಿಸಿದ್ದಾರೆ.
2000 ರಿಂದ 2007 ರ ವರೆಗೆ ಜೆ.ಓ.ಡಿ.ಸಿ ಹಾಗೂ ಡಿಪ್ಲೋಮಾ ಇವುಗಳಿಗೆ ಮಾತ್ರ ಸೀಮಿತ ಗೊಳಿಸಲಾಗಿತ್ತು . 2007 ರಿಂದ ಇದನ್ನೂ ಸ್ಥಗಿತಗೊಳಿಸಲಾಗಿದೆ . ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೂ ಪೂರ್ತಿಯಾಗಿರುವುದಿಲ್ಲ 2007 ನಂತರದ ಸಂತ್ರಸ್ತರ ಮಕ್ಕಳಿಗೆ ಈ ಸೌಲಭ್ಯ ದೊರೆಯದೇ ವಂಚಿತರಾಗಿದ್ದಾರೆ. ಆಸ್ತಿಗಳನ್ನು ಕಳೆದುಕೊಂಡ ಸಂತ್ರಸ್ತರ ಮಕ್ಕಳಿಗೆ ಶಾಶ್ವತವಾಗಿ ಉನ್ನತ ಮಟ್ಟದ ಶಿಕ್ಷಣದಲ್ಲಿ ಮೀಸಲಾತಿ ಶೀಘ್ರವೇ ಒದಗಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಅವರಿಗೆ ಮನವಿ ಸಲ್ಲಿಸಲಾಗಿದ್ದು , ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವಂತೆ ಒತ್ರಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
Kshetra Samachara
08/10/2022 12:24 pm